ಕ್ರೈಂ

ಬಾರ್ ಗಲಾಟೆಯಿಂದಾಗಿ ಪ್ರಾಣ ತೆತ್ತ ಯುವಕ..!ತನ್ನ ಮಗುವನ್ನು ಎದೆ ಮೇಲೆ ಮಲಗಿಸಿ ನಿದ್ರಿಸುತ್ತಿರುವಾಗ್ಲೇ ಹಂತಕರು ಮನೆಗೆ ನುಗ್ಗಿ ಮುಗಿಸಿಬಿಟ್ರು..!

35
Spread the love

ನ್ಯೂಸ್‌ ನಾಟೌಟ್‌ : ರಾಜ್ಯದಲ್ಲಿ ಕ್ರೈಂ ರೇಟ್‌ಗಳು (Crime Rate) ಜಾಸ್ತಿ ಆಗುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಇ ಪ್ರಕರಣ ಜಾಸ್ತಿ ಅಂತಲೇ ಹೇಳಬಹುದು. ಕ್ಷುಲ್ಲಕ ವಿಷಯಕ್ಕೆಲ್ಲ ಉಸಿರನ್ನೇ ನಿಲ್ಲಿಸುವ ಮನಸ್ಥಿತಿಗೂ ಜನ ಬಂದು ಬಿಡ್ತಾರೆ ಅಂದ್ರೆ ಖೇದಕರ ಸಂಗತಿ.ತಾಳ್ಮೆ ಕೆಟ್ಟು ಹೋದ್ರೆ ಮನುಷ್ಯ ಯಾವ ನಿರ್ಧಾರಕ್ಕೂ ಬರುತ್ತಾನೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯೆಂಬಂತಿದೆ.

ಸದ್ಯ ಬೆಂಗಳೂರಿನ ವಿವೇಕನಗರದಲ್ಲಿ ಈ ಘಟನೆಯೊಂದು ಬೆಳಕಿಗೆ ಬಂದಿದೆ. ರೌಡಿ ಮಿಲ್ಟ್ರಿ ಸತೀಶ್‌ ಕೇಸ್‌ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಬಂಧನವಾಗಿದೆ. ಸುನೀಲ್‌, ಪ್ರಶಾಂತ್, ಧನುಷ್, ಕ್ಲಾಮೇಟ್ ಬಂಧಿತ ಆರೋಪಿಗಳಾಗಿದ್ದಾರೆ.

ಜ.23 ರಂದು ಸತೀಶ್‌ ಕುಡಿಯಲು ಬಾರ್‌ವೊಂದಕ್ಕೆ ಹೋಗಿದ್ದ. ಈ ವೇಳೆ ಕುಡಿದು ಟೈಟ್‌ ಆಗಿದ್ದ ಆತ ಅಲ್ಲೇ ಇದ್ದ ಈ ನಾಲ್ವರು ಯುವಕರಿಗೆ ಗುರಾಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಎಲ್ಲರ ಮುಂದೆ ಹೀಗೆ ನಿಂದಿಸಿದ್ದಕ್ಕೆ ರೊಚ್ಚಿಗೆದ್ದ ನಾಲ್ವರು ಯುವಕರು ಉಸಿರು ನಿಲ್ಲಿಸುವ ಸ್ಕೆಚ್‌ ಹಾಕಿದ್ದರು. ರೌಡಿ ಸತೀಶ್‌ನನ್ನು ಮುಗಿಸಿ, ಏರಿಯಾದಲ್ಲಿ ಹವಾ ಮೈಂಟೇನ್‌ಗೆ ಮುಂದಾದರು.ಈ ನಾಲ್ವರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸತೀಶ್‌ ಬೆದರಿಕೆಯನ್ನೂ ಹಾಕಿದ್ದ. ಎಲ್ಲರ ಮುಂದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಮರುಕ್ಷಣವೇ ಆತನನ್ನು ಮುಗಿಸುವ ಪ್ಲ್ಯಾನ್‌ ಮಾಡಿದ್ದರು. ಕೇವಲ 18 ರಿಂದ 20 ವರ್ಷದ ಯುವಕರ ಗ್ಯಾಂಗ್‌ ಮಂಗಳವಾರ ರಾತ್ರಿಯೇ ಪ್ಲ್ಯಾನ್‌ ಮಾಡಿತ್ತು. ರಾತ್ರಿ ಪತ್ನಿ ಮನೆಗೆ ಬಂದ ಸತೀಶ್‌ನನ್ನು ಹಿಂಬಾಲಿಸಿತ್ತು.

ಕಳೆದ (ಜ.24) ಬುಧವಾರ ಮುಂಜಾನೆ ವಿವೇಕ್‌ನಗರದ ಮಯಾ ಬಜಾರ್‌ನ ಸ್ಲಂನಲ್ಲಿದ್ದ ಸತೀಶ್‌ ಮನೆ ಸುತ್ತಮುತ್ತ ಓಡಾಡುತ್ತಿದ್ದರು. ನಿದ್ದೆ ಮಂಪರಿನಲ್ಲಿದ್ದಾಗಲೇ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಪತ್ನಿ, ಮಗುವಿನ ಪಕ್ಕದಲ್ಲಿ ಮಲಗಿದ್ದಾಗ ಮನೆಯೊಳಗೆ ನುಗ್ಗಿ ಸತೀಶ್‌ನನ್ನು ಮುಗಿಸಿ ಅಲ್ಲಿಂದ ಪರಾರಿಯಾಗಿದ್ದರು.

ಏನಾಗುತ್ತಿದೆ ಎಂದು ಅರಿವಾಗುವುದರಲ್ಲೇ ಸತೀಶ್‌ ಉಸಿರು ಚೆಲ್ಲಿತ್ತು. ಸತೀಶ್‌ ತನ್ನ ಮಗುವನ್ನು ಎದೆ ಮೇಲೆ ಮಲಗಿಸಿಕೊಂಡಿದ್ದ. ಯುವಕರು ಸತೀಶ್‌ ಮೇಲೆ ದಾಳಿ ಮಾಡುವಾಗ ಮಗು ಮೇಲೂ ಮಾರಾಕಾಸ್ತ್ರವನ್ನು ಬೀಸಿದ್ದಾರೆ. ಇದರಿಂದಾಗಿ ಮಗುವಿನ ಕೈ ತುಂಡಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ರಾತ್ರಿ ಸ್ಕೆಚ್ ಹಾಕಿ ಮುಂಜಾನೆ ಮನೆಗೆ ನುಗ್ಗಿ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಲಗಿದ್ದಲ್ಲೇ ಎದುರಾಳಿಗಳ ಮಚ್ಚಿನೇಟಿಗೆ ಸತೀಶ್ ಅಲಿಯಾಸ್‌ ಮಿಲ್ಟ್ರಿ ಸತೀಶ್‌ ಕೊನೆಯುರಿಸಿರೆಳೆದಿದ್ದಾನೆ. ಅಪ್ಪ ಆರ್ಮಿಗೆ ಸೇರಿ ದೇಶಕ್ಕಾಗಿ ಹೋರಾಡಿ ಹೆಸರು ಮಾಡಿದರೆ, ಈತ ಏರಿಯಾದಲ್ಲಿ ಹವಾ ಮೈಂಟೇನ್ ಮಾಡಲು ಹೋಗಿ ಪೊಲೀಸರ ರೌಡಿ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದ. ಸರಿ ಸುಮಾರು ಏಳೆಂಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಸತೀಶನನ್ನು ಬುಧವಾರ ನಸುಕಿನ ಜಾವವೇ ಹಂತಕರು ಬಾರದ ಲೋಕಕ್ಕೆ ಕಳುಹಿಸಿದ್ದಾರೆ.

  Ad Widget   Ad Widget   Ad Widget   Ad Widget