ವೈರಲ್ ನ್ಯೂಸ್

ಕರ್ನಾಟಕದಲ್ಲಿ ಬಸ್‌ ನ ಒಳಗಡೆ ಮಹಿಳೆಯರಿಗೆ ಫ್ರೀ..ಆಂಧ್ರಪ್ರದೇಶದಲ್ಲಿ ಬಸ್‌ ನ ಹೊರಗೂ ಮಹಿಳೆಯರಿಗೆ ಫ್ರೀ..!, ಬಸ್‌ ವೊಂದರ ಹಿಂದೆ ನೇತಾಡಿಕೊಂಡು ಹೋಗುತ್ತಿರುವ ಮಹಿಳೆಯ ವಿಡಿಯೋ ವೈರಲ್

204

ನ್ಯೂಸ್ ನಾಟೌಟ್: ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯನವರು ಫ್ರೀ ಬಸ್ ಘೋಷಿಸಿದ ಬೆನ್ನಲ್ಲೇ ರಾಜ್ಯದ ಮಹಿಳೆಯರು ಬಸ್ಸಿನಲ್ಲಿ ಸೀಟು ಸಿಗದಿದ್ದರೂ ನಿಂತುಕೊಂಡಾದ್ರೂ ಉಚಿತ ಬಸ್ ಪ್ರಯಾಣದ ಖುಷಿ ಅನುಭವಿಸುತ್ತಿದ್ದಾರೆ.

ಮಹಿಳೆಯರ ನೂಕು ನುಗ್ಗಲಿನಲ್ಲಿ ಬಸ್ ನ ಡೋರ್ ಕಿತ್ತುಕೊಂಡು ಬಂದಿದೆ. ಕೆಲವು ಕಡೆ ಕಂಬಿಗಳೇ ಮುರಿದು ಹೋಗಿದೆ. ಈ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಬಸ್ ನ ಹಿಂಬದಿಯ ಮೆಟ್ಟಿಲಿನಲ್ಲಿ ಮಹಿಳೆಯೊಬ್ಬರು ನಿಂತುಕೊಂಡು ಪ್ರಯಾಣ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಆಂಧ್ರಪ್ರದೇಶದ ವಿಡಿಯೋ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಬಸ್ ನ ಒಳಗೆ ಮಹಿಳೆಯರಿಗೆ ಫ್ರೀ ಆದರೆ ಆಂಧ್ರಪ್ರದೇಶದಲ್ಲಿ ಬಸ್ ನ ಹೊರಗೂ ಮಹಿಳೆಯರಿಗೆ ಫ್ರೀ ಅನ್ನುವ ಟ್ರೋಲ್ ಡೈಲಾಗ್ ವೈರಲ್ ಆಗುತ್ತಿದೆ.

See also  ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶಿಸಿ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿ ಸಾವು..! 8 ವರ್ಷದ ಬಾಲಕಿಯನ್ನು ಬಲಿ ಪಡೆದ ಅಕ್ರಮ ವಿದ್ಯುತ್ ಸಂಪರ್ಕ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget