ಕೊಡಗುರಾಜಕೀಯ

ಕರ್ನಾಟಕ ಪಾಲಿಟಿಕ್ಸ್ ಜಿದ್ದಾ ಜಿದ್ದಿ,ಮಡಿಕೇರಿಯಲ್ಲಿ ಅಮಿತ್ ಶಾ ರೋಡ್ ಶೋ ಅರ್ಧಕ್ಕೆ ಮೊಟಕು

352

ನ್ಯೂಸ್ ನಾಟೌಟ್: ಚುನಾವಣಾ ಕಣ ರಂಗೇರುತ್ತಿದೆ. ಮಡಿಕೇರಿಗೆ ಆಗಮಿಸಿದ ಚಾಣಾಕ್ಯ , ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ನಗರದ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ  ಸಲ್ಲಿಸಿ, ಪ್ರಾರ್ಥಿಸಿದರು.ಆದರೆ ಕೊಡಗು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅವರ ರೋಡ್‌ ಶೋ ಅರ್ಧಕ್ಕೇ ಮೊಟಕುಗೊಂಡಿದ್ದು, ಅಮಿತ್‌ ಶಾ ಉಡುಪಿಯತ್ತ ಪ್ರಯಾಣ ಬೆಳೆಸಿದರು.

ಕೊಡುಗು ಜಿಲ್ಲೆಯು ಬಿಜೆಪಿಯ ಭದ್ರಕೋಟೆಯಾಗಿದ್ದರೂ ಕಾಂಗ್ರೆಸ್‌ ಈ ಬಾರಿ ಪೈಪೋಟಿ ನೀಡಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಚಾಣಕ್ಯ ಎಂದೇ ಖ್ಯಾತಿಯನ್ನು ಹೊಂದಿರುವ ಅಮಿತ್‌ ಶಾ ಅವರು ಕೊಡಗು ಜಿಲ್ಲೆಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದರು. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ ಬೋಪಯ್ಯ ಅವರ ಪರವಾಗಿ ಮತ ಯಾಚನೆ ನಡೆಸಿದರು.ಮಡಿಕೇರಿಯ ಹೊರವಲಯದ ಗಾಲ್ಫ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲ‌ಕ‌ ಆಗಮಿಸಿದ ಅಮಿತ್ ಶಾ ಅವರು, ಮಡಿಕೇರಿಯ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಂದ ರೋಡ್ ಶೋಗೆ ಚಾಲನೆ ನೀಡಿದರು.ಸುಮಾರು 1 ಕಿ.ಮೀ. ರೋಡ್ ಶೋ ನಡೆಸಿದ ಅಮಿತ್ ಶಾ ಅರ್ಧಕ್ಕೇ ಮೊಟಕುಗೊಳಿಸಿ ಅಲ್ಲಿಂದ ಉಡುಪಿಯತ್ತ ಪ್ರಯಾಣ ಬೆಳೆಸಿದರು.

10.30ಕ್ಕೆ ಅಮಿತ್‌ ಶಾ ಅವರು ಆಗಮಿಸಬೇಕಾಗಿತ್ತು. ಆದರೆ, ಅಮಿತ್‌ ಶಾ ಬಂದಿದ್ದು, ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ. ಹೀಗಾಗಿ ಬಂದ ಕೂಡಲೇ ರೋಡ್‌ ಶೋವನ್ನು ಪ್ರಾರಂಭ ಮಾಡಿದರೂ 1.30ರ ಹೊತ್ತಿಗೆ ರೋಡ್‌ಶೋವನ್ನು ಮೊಟಕುಗೊಳಿಸಿದರು. ಹಮಾಮಾನ ವೈಪರೀತ್ಯ ಹಾಗೂ ಉಡಪಿಯ ಕಾಪುವಿಗೆ ತೆರಳಲು ಇದ್ದುದರಿಂದ ಹೆಲಿಕಾಪ್ಟರ್‌ ಮೂಲಕ ಹೋಗುವುದು ಕಷ್ಟ ಎಂಬ ಕಾರಣಕ್ಕೆ ಅರ್ಧಕ್ಕೆ ರೋಡ್‌ ಶೋವನ್ನು ಮೊಟಕು ಮಾಡಿ ಅಲ್ಲಿಂದ ನಿರ್ಗಮಿಸಿದರು.

ಈ ಸಂದರ್ಭ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪಕ್ಷದ ಕಾರ್ಯಕರ್ತರು  ಹಾಜರಿದ್ದರು.

See also  ಮದೆನಾಡು: ಮನೆಯೊಳಗೆ ನುಗ್ಗಿದ ಲಾರಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget