Latest

ಯುವತಿಗೆ ಬಸ್ ನಲ್ಲಿ ಕೈ ಹಾಕಿದ ವಿಡಿಯೋ ವೈರಲ್, ಪ್ರಕರಣದ ಬೆನ್ನಲ್ಲೇ ಆರೋಪಿ ವೃದ್ದ ಅರೆಸ್ಟ್

2.6k

ನ್ಯೂಸ್ ನಾಟೌಟ್: ಖಾಸಗಿ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವತಿ೯ಸಿದ್ದ ವೃದ್ಧನನ್ನು ಮೂಡುಬಿದಿರೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಳುವಾಯಿಯ ನಿವಾಸಿ ವೃದ್ಧ ರೆಹ್ಮಾನ್ 60 ವರ್ಷ ಬಂಧಿತ. ಮಂಗಳೂರು-ಮೂಡುಬಿದಿರೆ–ಕಾಕ೯ಳ ಮಧ್ಯೆ ಸಂಚರಿಸುವ ಖಾಸಗಿ ಬಸ್ ನಲ್ಲಿ ಘಟನೆ ನಡೆದಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದ್ದು ಈ ಬಗ್ಗೆ ಯಾರೂ ದೂರು ಕೊಡದ ಹಿನ್ನೆಲೆಯಲ್ಲಿ ಪೊಲೀಸರು ವೃದ್ಧನನ್ನು ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದರು. ಆದರೆ ಶನಿವಾರ ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆ ಮೂಡುಬಿದಿರೆ ತೀರ್ವವಾಗಿ ವಿರೋಧಿಸಿದಲ್ಲದೆ ಸ್ವತ: ಸಂಘಟನೆ ವತಿಯಿಂದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ ಜಿ ಅವರಿಗೆ ದೂರನ್ನು ನೀಡಿದ್ದರು. ಈ ಸಂದಭ೯ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಇನ್ಸ್ ಪೆಕ್ಟರ್ ಅವರು ತಕ್ಷಣ ಕಾಯ೯ಪ್ರವೃತರಾಗಿ ರೆಹ್ಮಾನ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

See also  ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ..! ನಡುಗಿದ ದೆಹಲಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget