Latestಉಡುಪಿಕರಾವಳಿಕ್ರೈಂ

ಕಾರ್ಕಳ: ಚಾರ್ಜ್‌ಗೆ ಇಟ್ಟ ಮೊಬೈಲ್ ಸ್ಫೋಟ..! ಮನೆಗೆ ಆವರಿಸಿದ ಬೆಂಕಿ..!

566
Spread the love

ನ್ಯೂಸ್ ನಾಟೌಟ್: ಮನೆಯಲ್ಲಿ ಚಾರ್ಜ್‌ಗಿಟ್ಟ ಮೊಬೈಲ್ ಫೋನ್ ಸ್ಫೋಟಗೊಂಡು ಇಡೀ ಮನೆಯನ್ನೇ ಬೆಂಕಿ ಆವರಿಸಿಕೊಂಡ ಘಟನೆ ತೆಳ್ಳಾರು ರಸ್ತೆಯ 11ನೇ ಕ್ರಾಸ್‌ ನ ಮರತ್ತಪ್ಪ ಶೆಟ್ಟಿ ಕಾಲನಿಯಲ್ಲಿ ಶನಿವಾರ(ಫೆ.15) ನಡೆದಿದೆ.

ಮರತ್ತಪ್ಪ ಶೆಟ್ಟಿ ಕಾಲನಿಯ ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ.

ಮನೆಯಲ್ಲಿ ಚಾರ್ಜ್‌ಗಿಟ್ಟಿದ್ದ ಮೊಬೈಲ್ ಫೋನ್ ಮುಂಜಾನೆ 4 ಗಂಟೆ ಸುಮಾರಿಗೆ ಸ್ಫೋಟಗೊಂಡಿದೆ. ಇದರಿಂದ ಕಾಣಿಸಿಕೊಂಡ ಬೆಂಕಿ ಎರಡು ಅಂತಸ್ತಿನ ಮನೆಯನ್ನು ಆವರಿಸಿದೆ. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಿ ಟಿವಿ, ಕಿಟಕಿ, ಫ್ಯಾನ್, ಮೊಬೈಲ್, ಇಂಟೀರಿಯರ್, ಸೋಫಾ ಸೇರಿದಂತೆ ವಿವಿಧ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ.

See also  ಆತನ ಉಪದ್ರ ತಡೆಯಲಾರದೆ ಸಿಎಂ ಯೋಗಿ ಆದಿತ್ಯನಾಥ್ ಗೆ ರಕ್ತದಲ್ಲೇ ಪತ್ರ ಬರೆದ ವಿದ್ಯಾರ್ಥಿನಿಯರು..! ಪ್ರಾಂಶುಪಾಲ ಆಡಿದ್ದ ಆ ಪೋಲಿಯಾಟವೇನು..?
  Ad Widget   Ad Widget   Ad Widget