ಕರಾವಳಿರಾಜಕೀಯ

ವಿ.ಸುನೀಲ್ ಕುಮಾರ್ ಮತ್ತು ಸ್ವರ್ಣ ಕಾರ್ಕಳದ ಕನಸು…

285

ವರದಿ: ಶ್ರೀಜಿತ್ ಸಂಪಾಜೆ

ನ್ಯೂಸ್ ನಾಟೌಟ್: ಕಾರ್ಕಳದ ಅಭಿವೃದ್ಧಿಯಲ್ಲಿ ವಿ.ಸುನಿಲ್ ಕುಮಾರ್ ಹೆಸರು ಅಗ್ರಗಣ್ಯ. ಕಲೆ, ಸಾಹಿತ್ಯ, ಪ್ರವಾಸೋದ್ಯಮ, ರಸ್ತೆ, ನೀರಾವರಿ, ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹೀಗೆ ಸಾಲು ..ಸಾಲು ಅಭಿವೃದ್ಧಿ ವಿಚಾರದಲ್ಲಿ ಸುನೀಲ್ ಕುಮಾರ್ ಹೆಸರು ದೊಡ್ಡದಾಗಿ ಸದ್ದು ಮಾಡುತ್ತಿದೆ.

ಹೌದು, ‘ಸ್ವರ್ಣ ಕಾರ್ಕಳ, ಸ್ವಚ್ಛ ಕಾರ್ಕಳ’ ಎಂಬ ಘೋಷ ವಾಕ್ಯದೊಂದಿಗೆ ಸುನಿಲ್ ಕುಮಾರ್ ಅಭಿವೃದ್ಧಿ ಪಥದಲ್ಲಿ ಕಾರ್ಕಳವನ್ನು ಮಾದರಿ ತಾಲೂಕಾಗಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಕಳಕ್ಕೆ ಸುನೀಲ್ ಕುಮಾರ್ ಮತ್ತೊಮ್ಮೆ ಬೇಕಾಗಿದ್ದಾರೆ ಅನ್ನುವ ಅಭಿಪ್ರಾಯವನ್ನು ಕಾರ್ಕಳದ ಜನತೆ ವ್ಯಕ್ತಪಡಿಸುತ್ತಿದ್ದಾರೆ. ೧೫೦೦ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ವಾರಾಹಿ ಏತ ನೀರಾವರಿ, ಕಿಂಡಿ ಅಣೆಕಟ್ಟು, ಚತುಷ್ಪಥ ರಸ್ತೆ, ಶಿಕ್ಷಣ, ತ್ಯಾಜ್ಯ ವಿಲೇವಾರಿ ಸೇರಿದಂತೆ ಹತ್ತಾರು ಕ್ಷೇತ್ರಗಳ ಅಭಿವೃದ್ಧಿ ಬಿಜೆಪಿ ಸರಕಾರದ ಕಾಲದಲ್ಲಿ ಆಗಿದೆ ಅನ್ನುವುದು ಸ್ಥಳೀಯರ ಅಭಿಪ್ರಾಯ.

ಈ ಬಗ್ಗೆ ನ್ಯೂಸ್ ನಾಟೌಟ್ ಸ್ಥಳೀಯರನ್ನು ಮಾತನಾಡಿಸಿದಾಗ ವಿವಿಧ ಅಭಿಪ್ರಾಯಗಳು ಕೇಳಿ ಬಂದವು. ಸ್ಥಳೀಯರಾದ ಕೃಷ್ಣಪ್ಪ ಅನ್ನುವವರು ಮಾತನಾಡಿ, ‘ಕಾರ್ಕಳಕ್ಕೆ ಸುನಿಲ್ ಕುಮಾರ್ ಮತ್ತೊಮ್ಮೆ ಆಯ್ಕೆಯಾಗಿ ಬರಬೇಕು, ಅವರಿಂದ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ’ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಸ್ಥಳೀಯರಾದ ಕನಕಮ್ಮ ಅವರು, ‘ನಮ್ಮ ತಾಲೂಕಿನಲ್ಲಿ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಹಿಂದುಳಿದಿದ್ದರು. ಆದರೆ ಸುನೀಲ್ ಕುಮಾರ್ ಆಡಳಿತಕ್ಕೆ ಬಂದ ನಂತರ ಅನೇಕ ಮಹಿಳೆಯರಿಗೆ ಉನ್ನತ ಶಿಕ್ಷಣದ ಭಾಗ್ಯ ಒದಗಿ ಬಂದಿದೆ. ಅವರು ಮತ್ತೊಮ್ಮೆ ಗೆದ್ದು ಬರಲಿ’ ಎಂದು ಹಾರೈಸಿದರು.

‘ಕಾರ್ಕಳದ ಪ್ರವಾಸೋದ್ಯಮ ಅಭಿವೃದ್ಧಿಯಾಗಿದ್ದೇ ಸುನೀಲ್ ಕುಮಾರ್ ಅವರಿಂದ. ಅವರು ಈ ಸಲವೂ ಗೆಲ್ಲುವುದು ಖಚಿತ’ ಎಂದು ಸ್ಥಳೀಯ ಅಂಗಡಿ ಮಾಲೀಕರಾದ ವೆಂಕಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗೆ ಕಾರ್ಕಳದ ಹತ್ತಾರು ಕಡೆ ನ್ಯೂಸ್ ನಾಟೌಟ್ ತಂಡ ಜನಾಭಿಪ್ರಾಯವನ್ನು ಸಂಗ್ರಹಿಸಿತು. ಈ ವೇಳೆ ಸುನೀಲ್ ಕುಮಾರ್ ಗೆಲುವು ಖಚಿತ ಅನ್ನುವುದು ಹಲವರ ಅಭಿಪ್ರಾಯವಾಗಿದೆ.

https://www.youtube.com/watch?v=RoNnlp7cM10
See also  ಬೆಳ್ಳಾರೆ : ಆ್ಯಸಿಡ್ ಸೇವಿಸಿ ಮಹಿಳೆ ಸೂಸೈಡ್‌ಗೆ ಯತ್ನ,ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಘಟನೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget