ಕರಾವಳಿಕ್ರೈಂ

ಕಾರ್ಕಳದಿಂದ ಧರ್ಮಸ್ಥಳದ ಕಡೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ..! ತಂದೆ ಮತ್ತು 3 ಮಕ್ಕಳು ಸ್ಥಳದಲ್ಲೇ ಸಾವು, ತಾಯಿ ಗಂಭೀರ..!

ನ್ಯೂಸ್ ನಾಟೌಟ್: ನ್ಯೂಸ್ ನಾಟೌಟ್ : ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಇಂದು (ಸೆ.30) ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೊಸ್ಮಾರು ಎಂಬಲ್ಲಿನ ಪಾಜೆಗುಡ್ಡೆ ಬಳಿ ಬೈಕ್​ಗೆ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಸುರೇಶ್ ಆಚಾರ್ಯ(36), ಸಮೀಕ್ಷಾ(7), ಸುಶ್ಮಿತಾ(5) ಸುಶಾಂತ್(2) ಮೃತರು ಎಂದು ಗುರುತಿಸಲಾಗಿದೆ. ಇನ್ನು ಸುರೇಶ್ ಆಚಾರ್ಯ ಪತ್ನಿ ಮೀನಾಕ್ಷಿ ಆಚಾರ್ಯ(32) ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಕಡಬ: 800 ವರ್ಷದ ಹಿಂದಿನ ಕನ್ನಡ ಶಿಲಾ ಶಾಸನ ಪತ್ತೆ, ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಶಾಸನದಲ್ಲಿದೆ ‘ತುಳು ರಾಜ್ಯ’ ಎಂಬ ಉಲ್ಲೇಖ..!

ಪ್ರವಾಹ ಪೀಡಿತ ಸಂಪಾಜೆ, ಕಲ್ಲುಗುಂಡಿ, ಗೂನಡ್ಕಕ್ಕೆ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ ಏಕೆ?

ಕಡಿದು ಹಾಕಿದ್ದ ಬಾಳೆ ದಿಂಡಿನಲ್ಲಿ ಬಾಳೆಗೊನೆ, ಪ್ರಕೃತಿ ವಿಸ್ಮಯಕ್ಕೆ ನಿಬ್ಬೆರಗಾದ್ರು ಜನ!