ನ್ಯೂಸ್ ನಾಟೌಟ್: ಕೆಲಸಕ್ಕೆಂದು ಹೊರಗಡೆ ನಿಲ್ಲಿಸಿದ್ದ ಟಾಟಾ ಹಿಟಾಚಿ ಯಂತ್ರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ಶುಕ್ರವಾರ ನಡೆದ ಘಟನೆ ತಡವಾಗಿ ಬೆಳಿಕಿಗೆ ಬಂದಿದೆ.
ಕಲ್ಯಾ ಗ್ರಾಮದ ಜಾರ್ಕಳ ನಿವಾಸಿ ದಿನೇಶ್ ಶೆಟ್ಟಿ ಎಂಬವರಿಗೆ ಸೇರಿದ ಹಿಟಾಚಿಗೆ ಬೆಂಕಿ ಹಚ್ಚಿದ್ದಾರೆ. ದಿನೇಶ್ ಶೆಟ್ಟಿ ಅವರು ಹೊಸ ಕ್ರಷರ್ ಪ್ರಾರಂಭಿಸಲು ಸ್ಥಳ ಸಮತಟ್ಟು ಮಾಡುವ ಉದ್ದೇಶದಿಂದ ತನ್ನ ಮಾಲಿಕತ್ವದ ಟಾಟಾ ಹಿಟಾಚಿ ಯಂತ್ರವನ್ನು ತಂದು ನಿಲ್ಲಿಸಿದ್ದರು. ಎಪ್ರಿಲ್ 7ರಂದು ಬೆಳಗ್ಗೆ 9 ಗಂಟೆಗೆ ಬಂದು ನೋಡಿದಾಗ ಯಾರೋ ಕಿಡಿಗೇಡಿಗಳು ಹಿಟಾಚಿ ಯಂತ್ರಕ್ಕೆ ಬೆಂಕಿ ಹಚ್ಚಿದ್ದು ಯಂತ್ರವು ಬೆಂಕಿಗಾಹುತಿಯಾಗಿದೆ.
ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.