ಕರಾವಳಿ

ಕಾರ್ಕಳ: ಇದ್ದಕ್ಕಿದ್ದಂತೆ ಹೊತ್ತಿ ಉರಿದ ಮನೆ

292

 ನ್ಯೂಸ್ ನಾಟೌಟ್ : ಇದ್ದಕ್ಕಿದ್ದಂತೆ ಮನೆಯೊಂದು ಹೊತ್ತಿ ಉರಿದು ಭಸ್ಮವಾದ ಘಟನೆ ಇಂದು (ಶನಿವಾರ) ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಿಂದ ವರದಿಯಾಗಿದೆ.

 ಕಾರ್ಕಳ ತಾಲೂಕಿನ ಕಾಂತಾವಾರ ಗ್ರಾಮದ ಸರ್ವೆ  ನಂಬರ್ ೧೬೯ ರ ಸರ್ಕಾರಿ ಮನೆ ನಿರ್ಮಣ ಮಾಡಿಕೊಂಡಿದ್ದ ನೋನಯ್ಯ ಎಂಬವರ ಮನೆಯಲ್ಲಿ ಅವರ ಸಹೋದರಿಯ ಮಕ್ಕಳಾದ  ಸಂಜೀವ ಮತ್ತು ಪ್ರೇಮ  ಕಳೆದ ನಾಲ್ಕು ವರ್ಷಗಳಿಂದ  ವಾಸಿಸುತ್ತಿದ್ದರು. ಇವರು ಬೆಳಗ್ಗೆ ಕೂಲಿ ಕೆಲಸಕ್ಕೆ  ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು  ಮನೆ ಸಂಪೂರ್ಣ  ಭಸ್ಮವಾಗಿದೆ.   ಅವಘಡದಿಂದ ಸುಮಾರು  1 ಲಕ್ಷ ರು. ಗಳ ನ‍ಷ್ಟವಾಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ  ಗ್ರಾಮಕರಣಿಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

See also  ಈ ಕೆಲಸಕ್ಕೆ ನೀವು ಏಕೆ ಸೂಕ್ತ? ಎಂದು ಕಂಪನಿ ಕೇಳಿದ ಪ್ರಶ್ನೆಗೆ ಆತ ನೀಡಿದ ಉತ್ತರ ಎಲ್ಲೆಡೆ ವೈರಲ್..! ಸಂಸ್ಥೆಯ ಮುಖ್ಯಸ್ಥೆ ಹಂಚಿಕೊಂಡ ಅರ್ಜಿಯಲ್ಲೇನಿದೆ..?
  Ad Widget   Ad Widget     Ad Widget   Ad Widget   Ad Widget   Ad Widget