ಕರಾವಳಿಕಾಸರಗೋಡು

ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಕಳದ ಅಭಿವೃದ್ಧಿ ಇಡೀ ರಾಜ್ಯಕ್ಕೆ ಮಾದರಿ..!

336

ನ್ಯೂಸ್ ನಾಟೌಟ್: ಕಳೆದ ಕೆಲವು ವರ್ಷಗಳಿಂದ ಕಾರ್ಕಳ ವಿಧಾನಸಭಾ ಕ್ಷೇತ್ರವು ಶೈಕ್ಷಣಿಕವಾಗಿ ಭಾರಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಸಿಗಬೇಕು ಅನ್ನುವ ಧ್ಯೇಯ ವಾಕ್ಯದೊಂದಿಗೆ ವಿ ಸುನಿಲ್ ಕುಮಾರ್ ತಮ್ಮ ಕನಸನ್ನು ಇಟ್ಟುಕೊಂಡಿದ್ದರು. ಈ ಕನಸು ಇಂದು ಸಾಕಾರಗೊಂಡಿದೆ.

ಮುನಿಯಾಲು ಮತ್ತು ಹೊಸ್ಮಾರಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭ. ಹಾಸ್ಟೆಲ್ ಕಟ್ಟಡಗಳ ನವೀಕರಣ ಮತ್ತು ಆಧುನಿಕ ಸೌಲಭ್ಯಗಳ ಅಳವಡಿಕೆ. ಹತ್ತಾರು ಕಾಲೇಜುಗಳಿಗೆ ಅಟಲ್ ಟೆಂಕರಿಂಗ್ ಲ್ಯಾಬ್ ಮಂಜೂರು. ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅನುದಾನ. ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದ ಐಐಟಿ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆ, ಜರ್ಮನ್ ತಂತ್ರಜ್ಞಾನ ಹೊಂದಿರುವ ಕೆಜಿಟಿಟಿಐ ಸ್ಥಾಪನೆಯ ಮೂಲಕ ಯುವ ಸಮುದಾಯಕ್ಕೆ ಉದ್ಯೋಗದ ಭರವಸೆ ಹಾಗೂ ಕಾರ್ಕಳದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪಿಸಿ ಉದ್ಯೋಗ ಸೃಷ್ಟಿಸಲಾಗಿದೆ. ಪ್ಯಾರಾ ಮೆಡಿಕಲ್ ಮತ್ತು ಬಿಎಸ್‌ಸಿ ನರ್ಸಿಂಗ್ ಕಾಲೇಜು ಆರಂಭಿಸಲಾಗಿರುವುದು ವಿಶೇಷ.

See also  ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.1, ಸದ್ಯ ರಾಜ್ಯದಲ್ಲಿ ಇರುವ ಆನೆಗಳ ಒಟ್ಟು ಸಂಖ್ಯೆಯೆಷ್ಟು ಗೊತ್ತಾ..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget