ಉಡುಪಿಕರಾವಳಿಕ್ರೈಂ

ಕಾರ್ಕಳ: ಅತ್ಯಾಚಾರ ಪ್ರಕರಣದ 3ನೇ ಆರೋಪಿ ಬಂಧನ.! ಡ್ರಗ್ಸ್​​ ವಿರೋಧಿ ಅಭಿಯಾನದಲ್ಲಿ ಇದ್ದವನೇ ಡ್ರಗ್ಸ್ ಪೂರೈಸಿದ್ದ..! ಬಂಧಿತ ಆರೋಪಿ ಬಿಜೆಪಿ ಕಾರ್ಯಕರ್ತ..?

268

ನ್ಯೂಸ್ ನಾಟೌಟ್: ಉಡುಪಿ ಜಿಲ್ಲೆಯ ಕಾರ್ಕಳ ದ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಕೇಸ್​ಗೆ ಸಂಬಂಧಿಸಿ ಕಾರ್ಕಳ ಠಾಣೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅಭಯ್ ಎಂಬ ಈತ ಅತ್ಯಾಚಾರಿ ಅಲ್ತಾಫ್ ​ಗೆ ಡ್ರಗ್ಸ್ ತಂದು ಕೊಟ್ಟಿದ್ದ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಇದೀಗ 3ನೇ ಆರೋಪಿ ಅಭಯ್ ​ನನ್ನು ಪೊಲೀಸರು ಬಂಧಿಸಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ. ಬಂಧಿತ ಆರೋಪಿ ಅಭಯ್ ಫೇಸ್​​ಬುಕ್​ನಲ್ಲಿ MLA ಸುನೀಲ್​​ಕುಮಾರ್​​ ಫೋಟೋ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಇನ್ನು ಕಳೆದ ತಿಂಗಳು ಬಜರಂಗದಳ ಡ್ರಗ್ಸ್​ ವಿರೋಧಿ ಅಭಿಯಾನ ನಡೆಸಿತ್ತು. ಈ ಡ್ರಗ್ಸ್​​ ವಿರೋಧಿ ಅಭಿಯಾನದಲ್ಲಿ ಆರೋಪಿ ಅಭಯ್ ಕೂಡ ಭಾಗಿಯಾಗಿದ್ದ. ಅಭಿಯಾನದ ಕೊನೇಯ ಹಂತವಾಗಿ ಕಾರ್ಕಳ DySPಗೆ ಮನವಿ ನೀಡುವ ಸಮಯದಲ್ಲಿಯೂ ಜೊತೆಗಿದ್ದ. ಪ್ರಮುಖ ಆರೋಪಿ ಅಲ್ತಾಫ್​​​ಗೆ ಡ್ರಗ್ಸ್​ ಪೂರೈಸಿದ್ದ ಅಭಯ್​ನನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

Click

https://newsnotout.com/2024/08/darshan-case-fir-kannada-news-viral-news-thugudeepa/
https://newsnotout.com/2024/08/ambulance-collision-to-lorry-kannada-news-relative-nomore/
See also  ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮಾಹಿತಿ ತರಿಸಿಕೊಂಡು ಕ್ರಮ: ಆರಗ ಜ್ಞಾನೇಂದ್ರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget