ಕರಾವಳಿರಾಜಕೀಯ

ಕಾರ್ಕಳ ಬಿಜೆಪಿ ಅಭ್ಯರ್ಥಿ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ,ಅದ್ದೂರಿ ಮೆರವಣಿಗೆಗೆ ಸಾಕ್ಷಿಯಾದ ಸಾವಿರಾರು ಕಾರ್ಯಕರ್ತರು,ರೋಡ್ ಶೋನಲ್ಲಿ ಪಕ್ಷದ ಮುಖಂಡರು,ಅಭಿಮಾನಿಗಳು ಭಾಗಿ

ನ್ಯೂಸ್ ನಾಟೌಟ್ : ಕಾರ್ಕಳದಲ್ಲಿ ರಾರಾಜಿಸಿದ ಬಿಜೆಪಿ ಬಾವುಟ,ಸಾಗರೋಪಾದಿಯಲ್ಲಿ ಹರಿದು ಬಂದ ಅಭಿಮಾನಿಗಳು,ಕೇಸರಿಶಾಲು,ಪೇಟ ಧರಿಸಿ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರು,ಭಗವಾಧ್ವಜ,ಚೆಂಡೆ ತಾಳ ಸದ್ದು,ತಾಳಕ್ಕೆ ತಕ್ಕ ಹೆಜ್ಜೆ,ಇಡೀ ನಗರವೇ ಸಂಪೂರ್ಣ ಕೇಸರಿಮಯವಾಗಿ ಕಂಡು ಬಂತು.

ಕುತೂಹಲ ಕೆರಳಿಸಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಅವರು ಉಮೇದುವಾರಿಕೆಯನ್ನು ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರೊಂದಿಗೆ ರೋಡ್ ಶೋ ಮೂಲಕ ಬಂದು ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರವನ್ನು ಸಲ್ಲಿಸಿದರು.

ಕಾರ್ಕಳದ ಸ್ವರಾಜ್ ಮೈದಾನದಿಂದ ಆರಂಭಗೊಂಡ ಬೃಹತ್ ಮೆರವಣಿಗೆಗೆ ಬಿಜೆಪಿ ಮುಖಂಡರು,ಅಭಿಮಾನಿಗಳು, ಕಾರ್ಯಕರ್ತರು ಸಾಕ್ಷಿಯಾದರು.ಇಡೀ ನಗರವೇ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು.ಕಾರ್ಕಳದ ಅನಂತ ಶೈಲ ವೃತ್ತದಿಂದ ತೆರೆದ ವಾಹನದಲ್ಲಿ ವಿ.ಸುನೀಲ್ ಕುಮಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಉಡುಪಿ ಶಾಸಕ ರಘುಪತಿ ಭಟ್ ಸಹಿತ ಹಲವು ಬಿಜೆಪಿ ಪ್ರಮುಖರು ಪಾಲ್ಗೊಂಡರು. ಕಾರ್ಕಳದ ಚುನಾವಣಾ ಕಣ ಈ ಸಲ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಸಲ ಹಿಂದೂ ಪರ ಸಂಘಟನೆಯ ಪ್ರಬಲ ನಾಯಕ ಪ್ರಮೋದ್ ಮುತಾಲಿಕ್ ಕಣಕ್ಕಿಳಿದಿರುವುದರಿಂದ ಸಹಜ ಕುತೂಹಲ ‌ಕೆರಳಿಸಿದೆ.

Related posts

ದಕ್ಷಿಣ ಕನ್ನಡ ಗ್ರಾಮ ಪಂಚಾಯಿತಿಗಳಲ್ಲಿ ಬೃಹತ್ ಉದ್ಯೋಗಾವಕಾಶ

ಸೌಜನ್ಯ ಕೇಸ್ : ಮಹತ್ವದ ಹೇಳಿಕೆ ನೀಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ,ಏನು ಹೇಳಿದ್ದಾರೆ ?

ಸಂಪಾಜೆ: ಒಂದೇ ದಿನ ರಾಷ್ಟ್ರೀಯ ಹೆದ್ದಾರಿ ಎರಡೆರಡು ಸಲ ಬಂದ್..! ಮರ, ಬಿದಿರು ಬೀಳೋದು ಮಾಮೂಲಿ..ವಾಹನ ಸವಾರರೇ ಇರಲಿ ಎಚ್ಚರ