ಬೆಂಗಳೂರು

ಮೆಟ್ರೋದಲ್ಲಿಯೂ ಸದ್ದು ಮಾಡಿದ ಕರಿಮಣಿ ಮಾಲೀಕ ಹಾಡು,ನಿಯಮ ಗಾಳಿಗೆ ತೂರಿದ ಪ್ರಯಾಣಿಕರ ನಡೆಗೆ ಭಾರೀ ಆಕ್ರೋಶ..!

151

ನ್ಯೂಸ್‌ ನಾಟೌಟ್‌: ಸಾಮಾಜಿಕ ತಾಲತಾಣದಲ್ಲಿ ಟ್ರೆಂಡ್‌ ಆಗಿದ್ದ ‘ಕರಿಮಣಿ ಮಾಲೀಕ’ ಹಾಡು (Karimani Malika Song) ಇದೀಗ ನಮ್ಮ ಮೆಟ್ರೋದಲ್ಲಿ (Namma Metro)ದಲ್ಲಿಯೂ ಸದ್ದು ಮಾಡುತ್ತಿದೆ. ಯುವಕರು ಈ ಹಾಡು ಹಾಡುವ ಮೂಲಕ ಸಹ ಪ್ರಯಾಣಿಕರಿಗೆ ಭಾರಿ ತೊಂದರೆಯುಂಟು ಮಾಡಿದ್ದಾರೆ.

‘ಕರಿಮಣಿ ಮಾಲೀಕ’ ಹಾಡು ಇತ್ತೀಚಿಗೆ ಬಾರಿ ಟ್ರೆಂಡಿಂಗ್‌ನಲ್ಲಿರುವ ಹಾಡುಗಳಲ್ಲಿ ಒಂದಾಗಿತ್ತು.ಅನೇಕರು ಈ ಹಾಡಿಗೆ ರೀಲ್ಸ್‌ ಮಾಡಿ ಕುಣಿದಿದ್ದರು. ಈ ಹಾಡನ್ನು ಕೇಳಿ ಪುಳಕಿತರಾಗಿ ಸಾಮಾನ್ಯ ಜನ ಕೂಡ ರೀಲ್ಸ್ ಮಾಡೋದಕ್ಕೆ ಆರಂಭಿಸಿದ್ದರು. ಆದರೆ ಈ ಹಾಡು ಈಗ ನಮ್ಮ ಮೆಟ್ರೋಗೂ ಎಂಟ್ರಿ ಕೊಟ್ಟಿದೆ. ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವಕರ ಗುಂಪೊಂದು ಈ  ಹಾಡು ಹಾಡಿ ಜೋಶ್‌ನಲ್ಲಿ ಕಿರುಚಿದ್ದು, ಇದರಿಂದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರಿಗೆ ತೊಂದರೆ ಆಗಿದೆ. 

ಮೆಟ್ರೋದಲ್ಲಿ ಪ್ರಯಾಣಿಸುವ ಸಂದರ್ಭ ರೀಲ್ಸ್ ಮಾಡುವುದು ಅಥವಾ ಜೋರಾಗಿ ಸೌಂಡ್ ಮಾಡಬಾರದು ಎಂಬ ನಿಯಮ ಇದೆ. ಆದರೆ ಯುವಕರ ಗ್ಯಾಂಗ್ ಈ ನಿಯಮವನ್ನು ಮೀರಿ ‘ಕರಿಮಣಿ ಮಾಲೀಕ’ ಹಾಡು ಹಾಡಿ ಜೋರಾಗಿ ಕಿರುಚಿದ್ದಾರೆ. ನಿಯಮ ಗಾಳಿಗೆ ತೂರಿದ ಪ್ರಯಾಣಿಕರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

See also  ರಾತ್ರಿ ನೇಣಿಗೆ ಶರಣಾದ ಕಾಂಗ್ರೆಸ್​​ ಶಾಸಕನ ಪತ್ನಿ..! ಪತಿಗೆ ವೀಡಿಯೋ ಕಾಲ್ ಮಾಡಿ ತಾನು ಸಾಯುತ್ತಿದ್ದೇನೆ ಎಂದಿದ್ದ ಸರ್ಕಾರಿ ಶಾಲಾ ಶಿಕ್ಷಕಿ..! ಶಾಸಕನ ಬಗ್ಗೆ ಅನುಮಾನಗೊಂಡ ಪೊಲೀಸರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget