ಕೊಡಗು

ಕರಿಕೆ ಸರ್ಕಾರಿ ಪ್ರೌಢಶಾಲೆಯಲ್ಲಿ 76 ನೇ ಸ್ವಾತಂತ್ಯ ದಿನಾಚರಣೆ, ದೇಶ ಪ್ರೇಮದ ಸಂದೇಶ ಸಾರಿದ ವಿದ್ಯಾರ್ಥಿಗಳು

ನ್ಯೂಸ್ ನಾಟೌಟ್ : ಕರಿಕೆ ಸರ್ಕಾರಿ ಪ್ರೌಢಶಾಲೆಯಲ್ಲಿ 76 ನೇ ಸ್ವಾತಂತ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕರಿಕೆ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೆ. ಆರ್ ಜನಾರ್ಧನನ್ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ಸಾರಿದರು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಬೇಕಾದ ಮೌಲ್ಯಗಳನ್ನು ಹೇಳಿದರು.

ಅಖಿಲ್ ಕೆ.ಜೆ ಗಣ್ಯರಿಗೆ ಗೌರವ ನೀಡಿದರು. ಈ ವೇಳೆ ಸಿಹಿ ತಿಂಡಿಗಳನ್ನು ಹಂಚಲಾಯಿತು. ನಂತರ ವಿದ್ಯಾರ್ಥಿಗಳು -ಶಿಕ್ಷಕರು , ಗ್ರಾಮಸ್ಥರು ದೇಶ ಪ್ರೇಮದ ಘೋಷಣೆಯ ಜೊತೆಗೆ ಮೆರವಣಿಗೆಯ ಮೂಲಕ ಕರಿಕೆ ಗ್ರಾಮ ಪಂಚಾಯತ್‌ಗೆ ಕಛೇರಿಗೆ ತಲುಪಿದರು.

ಈ ವೇಳೆ ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್ . ಬಾಲಚಂದ್ರನ್ ನಾಯರ್ , ಉಪಾಧ್ಯಕ್ಷೆ ಕಲ್ಪನಾ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್ ಎಸ್‌ ಡಿಎಂಸಿ ಉಪಾಧ್ಯಕ್ಷರು ಯಮುನಾ, ಚಂಗಪ್ಪ, ಮೇನಕಾ ,ಸತ್ಯನಾಥ್ ,ಜಯಂತಿ, ಧನ್ಯ , ಶಾಲಾ ಮುಖೋಪಾಧ್ಯಾಯ ಅಶೋಕ್ ಮತ್ತು ಶಿಕ್ಷಕ ವೃಂದದವರಾದ ಪದ್ಮಿನಿ, ಶಾಮಿಲಿ, ಅರುಣ , ಪರಸಪ್ಪ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Related posts

ಸಂಪಾಜೆ-ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಭೀತಿ..!, ಇಂದು ರಾತ್ರಿಯಿಂದ (ಜು18) ನಾಲ್ಕು ದಿನ ವಾಹನ ಸಂಚಾರ ನಿರ್ಬಂಧ

ಪುತ್ತೂರು: ನನ್ನ ಕ್ಷೇತ್ರದಲ್ಲಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಶಕ್ತಿ ನನಗಿದೆ,ಬೆಳ್ತಂಗಡಿ ಶಾಸಕರು ಇಲ್ಲಿಗೆ ಬಂದು ಮಾತನಾಡುವ ಅಗತ್ಯವಿಲ್ಲ-ಶಾಸಕ ಅಶೋಕ್ ರೈ

ಭಾಗಮಂಡಲದಲ್ಲಿ ಮನೆಗೆ ನುಗ್ಗಿದ ಕಳ್ಳ..ಕಳ್ಳಿ..! 232 ಗ್ರಾಂ. ಚಿನ್ನಾಭರಣ ದೋಚಿ ಎಸ್ಕೇಪ್..!