ನಮ್ಮ ತುಳುವೇರ್

ಕರಾವಳಿಗರೇ ‘ಬಲೆ ಮಾಸ್ಕ್ ಪಾಡ್ದ್ ತೆಲಿಪುಗ’ ಇದು ರಾಜ್ಯ ಆರೋಗ್ಯ ಇಲಾಖೆಯ ಟ್ರೆಂಡಿಂಗ್ ಟ್ವೀಟ್

594
Spread the love

ಮಂಗಳೂರು: ಕೊರೊನಾ ಸಂದರ್ಭ ಪ್ರತಿಯೋರ್ವರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎನ್ನುವ ಸಲುವಾಗಿ ‘ಬಲೆ ಮಾಸ್ಕ್ ಪಾಡ್ದ್ ತೆಲಿಪುಗ’ (ಬನ್ನಿ ಮಾಸ್ಕ್ ಹಾಕಿ ನಗೋಣ) ಎಂದು ರಾಜ್ಯ ಆರೋಗ್ಯ ಇಲಾಖೆ ತುಳುವಿನಲ್ಲಿ ಟ್ವೀಟ್ ಮಾಡಿದೆ. ಕರಾವಳಿಗರೊಬ್ಬರು ಟ್ವೀಟ್ ಮಾಡಿದ್ದು, “ಏರ್ಲಾ ಮಾಸ್ಕ್ ಪಾಡುಜ್ಜೆರ್ ಐಕ್ ಯಾನ್ಲಾ ಮಾಸ್ಕ್ ಪಾಡುಜ್ಜಿ(ಯಾರು ಮಾಸ್ಕ್ ಧರಿಸುವುದಿಲ್ಲ. ಹಾಗಾಗಿ ನಾನೂ ಮಾಸ್ಕ್ ಧರಿಸುವುದಿಲ್ಲ) ಎಂದು ಹೇಳಿದರೆ, ಮುಂದಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ಗೆ ಕಾರಣವಾಗಬಹುದು. ಪ್ರತಿಯೋರ್ವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೊರೊನಾ ಹರಡುವಿಕೆಯನ್ನು ತಡೆಯಿರಿ” ಎಂದು ಬರೆದಿದ್ದರು. ಮುಖ್ಯಮಂತ್ರಿಗಳು ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಇತರರಿಗೆ ಈ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದರು. ಈ ಪೋಸ್ಟ್ ಅನ್ನು ರಾಜ್ಯ ಆರೋಗ್ಯ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ‘ಬಲೆ ಮಾಸ್ಕ್ ಪಾಡ್ದ್ ತೆಲಿಪುಗ’ ಎಂದು ರೀ ಟ್ವೀಟ್ ಮಾಡಲಾಗಿದೆ.

See also  ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ದೈವಾರಾಧನೆ, ಮಹಿಳೆಯರನ್ನು ನಿಂದಿಸಿದವ ಅರೆಸ್ಟ್‌..! ಅಶ್ಲೀಲ ಫೋಟೋಗಳ 'ಪೋಲಿ' ಪೊಲೀಸರ ಕೈಗೆ ಸಿಕ್ಕಿಬಿದ್ದದ್ದು ಹೇಗೆ?
  Ad Widget   Ad Widget   Ad Widget   Ad Widget   Ad Widget   Ad Widget