ನ್ಯೂಸ್ ನಾಟೌಟ್:ಕಾರನ್ನು ಟ್ರಯಲ್ ನೋಡೋದಕ್ಕಾಗಿ ಯುವಕನೋರ್ವ ಕಾರನ್ನು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮನೆಯ ಗೋಡೆಗೆ ಗುದ್ದಿದೆ.ಈ ವೇಳೆ ಅಲ್ಲೇ ಸಿಟೌಟ್ ನಲ್ಲಿ ಆಟವಾಡುತ್ತಿದ್ದ ಹೆಣ್ಣು ಮಗುವಿಗೆ ಗಾಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಬಗ್ಗೆ ವರದಿಯಾಗಿದೆ.
ಮಹಮ್ಮದ್ ಮೊಟ್ಟೆತ್ತೋಡಿ ಅವರ ಮನೆಯ ಸಿಟೌಟಿನ ಮೇಲೆ ಬಂದಿರುವ ಕಾರು ಮೆಟ್ಟಿಲು ಬಳಿ ಇರುವ ಗೋಡೆಯ ಮೂಲೆಯನ್ನು ಒಡೆದು ಪಕ್ಕದಲ್ಲಿರುವ ಮೇಲ್ಚಾವಣಿಯ ಸಪೋರ್ಟ್ ಕಂಬಕ್ಕೆ ಗುದ್ದಿದೆ. ಇದಕ್ಕೂ ಮುನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಗೂ ಢಿಕ್ಕಿ ಹೊಡೆದಿತ್ತು. ಈ ವೇಳೆ ಮನೆಯ ಮೆಟ್ಟಿಲು ಬಳಿ ಮಗು ಆಟವಾಡುತ್ತಿತ್ತು. ಮಗುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ನಿವಾಸಿಯ ಪರಿಚಯದ ಯುವಕ ಕಾರಿನ ಟ್ರಯಲ್ ನೋಡಲು ಚಲಾಯಿಸಿದ್ದು, ಈ ವೇಳೆ ಆತನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಗೂ ಮೊದಲು ಇದೇ ಸ್ಥಳದಲ್ಲಿ ಇನ್ನೂ ಮೂರು, ನಾಲ್ಕು ಮಂದಿ ಮಕ್ಕಳು ಆಟವಾಡುತ್ತಿದ್ದರು ಎನ್ನಲಾಗಿದೆ.