ನ್ಯೂಸ್ ನಾಟೌಟ್: ಅಪ್ರಾಪ್ತ ವಯಸ್ಕರ ಸ್ಕೂಟರ್ ಚಾಲನೆ ಯಾವುದೇ ಕಾರಣಕ್ಕೂ ಸೇಫ್ ಅಲ್ಲ. ಜತೆಗೆ ಇದು ಕಾನೂನು ವಿರುದ್ಧವೂ ಹೌದು.ಅಪ್ರಾಪ್ತರು ಯಾವುದೇ ವಾಹನಗಳನ್ನು ಚಲಾಯಿಸಿದರೂ ಅವರ ಪೋಷಕರು ದಂಡ ತೆರಬೇಕಾಗುತ್ತದೆ. ಹೀಗಿದ್ದರೂ ಕೂಡ ಕೆಲವೊಂದು ಕಡೆ ಅಪ್ರಾಪ್ತ ಬಾಲಕ ಬಾಲಕಿಯರು ಈ ಸಾಹಸಕ್ಕೆ ಇಳಿಯುತ್ತಲೇ ಇರುತ್ತಾರೆ.ಇದೀಗ ಇಂತಹ ಘಟನೆಯೊಂದು ಬಂಟ್ವಾಳದಿಂದ ವರದಿಯಾಗಿದೆ.
ಬಂಟ್ವಾಳ ಸಂಚಾರ ಪೊಲೀಸರು ಸಮರ ಮುಂದುವರಿಸಿದ್ದು, ಅಪ್ರಾಪ್ತ ವಯಸ್ಕ ಪುತ್ರನಿಗೆ ಸ್ಕೂಟರ್ ಕೊಟ್ಟ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಗುರುವಾರ ಬಂಟ್ವಾಳ ನ್ಯಾಯಾಲಯದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ತಂದೆ ಪಾಣೆಮಂಗಳೂರು ಗೂಡಿನಬಳಿಯ ಸಯ್ಯದ್ ಇಮ್ತಿಯಾಜ್ ಗೆ 26,500 ರೂ. ದಂಡ ವಿಧಿಸಿದ್ದಾರೆ. ಮಾ. ೫ರಂದು ಇದೇ ರೀತಿಯ ಪ್ರಕರಣದಲ್ಲಿ 26 ಸಾವಿರ ರೂ. ದಂಡ ವಿಧಿಸಲಾಗಿತ್ತು.
View this post on Instagram