ಕರಾವಳಿ

ಸ್ಕಾರ್ಫಿಯೊ ಕಾರಿನಲ್ಲಿ ಬಂದು ಶಾಸಕ ಹರೀಶ್ ಪೂಂಜಾರ ಕಾರಿನತ್ತ ತಲ್ವಾರ್ ಝಳಪಿಸಿದವ ಯಾರು?

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಾಸಕರಾಗಿ ಭಾರಿ ಹೆಸರು ಮಾಡಿರುವ ಹರೀಶ್ ಪೂಂಜಾರಿಗೆ ಸ್ಕಾರ್ಫಿಯೋ ಕಾರಿನಲ್ಲಿ ಬಂದ ದುಷ್ಕರ್ಮಿ ತಲ್ವಾರ್ ತೋರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಬೆಚ್ಚಿ ಬೀಳಿಸಿದೆ.

ಹರೀಶ್‌ ಪೂಂಜಾರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ದೂರಿನಲ್ಲಿ ಕಾರು ಚಾಲಕ ನವೀನ್ ಏನು ಉಲ್ಲೇಖಿಸಿದ್ದಾರೆ?. ಅಂದು ನಡೆದಿದ್ದಾದರೂ ಏನು? ಅನ್ನುವುದರ ಬಗ್ಗೆ ವಿವರಿಸಿದ್ದಾರೆ. ಈ ಬಗೆಗಿನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

ನವೀನ್ ಹೆಸರಿನವನಾದ ನಾನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ ೧೨-೧೦-೨೦೨೨ರಂದು ಹರೀಶ್ ಪೂಂಜಾರವರು ಬೆಂಗಳೂರಿಗೆ ಹೋಗಿದ್ದು ದಿನಾಂಕ ೧೩-೧೦-೨೦೨೨ರಂದು ಸಂಜೆ ೬.೨೦ಕ್ಕೆ ವಿಮಾನ ಮೂಲಕ ಮಂಗಳೂರಿಗೆ ಬರುವ ಮಾಹಿತಿಯನ್ನು ನನಗೆ ನೀಡಿದ್ದಾರೆ. ಆ ಪ್ರಕಾರವಾಗಿ ಅವರ ಕಾರು ಕೆಎ೧೯ ಎಂಪಿ ೦೩೬೯ ನೋಂದಾಯಿತ ಕಾರನ್ನು ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅಲ್ಲಿಂದ ಶಾಸಕರನ್ನು ಕರೆದುಕೊಂಡು ಮಂಗಳೂರಿನ ಸರ್ಕೂಟ್ ಹೌಸ್‌ ಗೆ ಹೋಗಿ ಅಲ್ಲಿ ಮೀಟಿಂಗ್ ನಲ್ಲಿ ಭಾಗವಹಿಸಿ ಬಳಿಕ ರಾತ್ರಿ ೧೦.೪೫ಕ್ಕೆ ಸರ್ಕೂಟ್‌ ಹೌಸ್‌ ನಿಂದ ನಾನು ಶಾಸಕರ ಕಾರನ್ನು ಒಬ್ಬನೇ ಚಲಾಯಿಸಿಕೊಂಡು ಬಂದೆ.ಶಾಸಕರು ಅವರ ಸ್ನೇಹಿತರಾದ ಪ್ರಶಾಂತ್ ಹಾಗೂ ಕುಶಿತ್ ಅವರ ಕಾರು ಕೆಎ ಎಂಇ ೫೫೬೦ ಕಾರಿನಲ್ಲಿ ಕುಳಿತುಕೊಂಡು ಬಂದರು. ನನ್ನ ಎದುರಿನಿಂದ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಹೋಗುತ್ತಿತ್ತು. ಈ ವೇಳೆ ನಂತೂರು, ಪಡೀಲ್‌ ಮಾರ್ಗವಾಗಿ ಬರುತ್ತಾ ನಾಗುರಿ ರೈಲ್ವೆ ಓವರ್‌ ಬ್ರಿಡ್ಜ್‌  ತಲಭಾಗದಲ್ಲಿ ಒಂದು ಬಿಳಿ ಬಣ್ಣದ ಸ್ಕಾರ್ಫಿಯೋ ಕಾರು ನಮ್ಮನ್ನು ಹಿಂಬಾಲಿಸಿಕೊಂಡು ಬಂದಿದೆ. ಈ ಬಗ್ಗೆ ನಾನು ಶಾಸಕರಿಗೆ ಫೋನ್ ಮಾಡಿ ವಿಚಾರ ತಿಳಿಸಿದೆ. ನಾನು ಚಾಲನೆ ಮಾಡುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿ ಶಾಸಕರು ಚಲಾಯಿಸುತ್ತಿದ್ದ ಕಾರನ್ನು ಪರಂಗಿಪೇಟೆ ಮೀನು ಮಾರ್ಕೆಟ್ ಸಮೀಪ ಅಡ್ಡಹಾಕಿ ಚಾಲನೆ ಮಾಡುತ್ತಿದ್ದ ಕುಶಿತ್ ರನ್ನು ಉದ್ದೇಶಿಸಿ ರಂಡೆ ಮಕ್ಕಳೇ ಎಂದು ಬೈದು ಕೈಯಲ್ಲಿದ್ದ ಆಯುದ್ಧ ತೋರಿಸಿದ್ದಾನೆ. ಕೂಡಲೇ ನಾನು ಫರಂಗಿಪೇಟೆಯ ಹೊರಠಾಣೆಯ ಎದುರು ಕಾರನ್ನು ನಿಲ್ಲಿಸಿದ ಸಮಯ ಕಾರನ್ನು ವೇಗವಾಗಿ ಬಿಸಿ ರೋಡ್‌ ಕಡೆ ಚಲಾಯಿಸಿಕೊಂಡು ಬಂದಿದ್ದಾನೆ. ಆತ ಯಾರು ಅನ್ನುವುದನ್ನು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

Related posts

ಸಂಚಾರ ನಿಯಮ ಉಲ್ಲಂಘಿಸಿದ 222 ವಾಹನ ಚಾಲಕರ ಡಿಎಲ್ ರದ್ದು! ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ ಶಿಫಾರಸ್ಸಿನಲ್ಲೇನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ: ಸರ್ಪಸಂಸ್ಕಾರ ಸೇವೆಯ ಸೇವಾ ದರ ಪರಿಷ್ಕರಣೆ 

ಅಕ್ಷರ ಕಲಿಸಿದ ಗುರುವನ್ನು ಮರೆಯದೆ ಬೆಂಗಳೂರಿನಲ್ಲಿ ಗೌರವಿಸಿದ ಸಜ್ಜನ..!, ವಿದ್ಯೆ ಕಲಿಸಿದ ಗುರುವಿಗೆ ವಂದಿಸಿದ ಉಮ್ಮರ್ ಬೀಜದಕಟ್ಟೆ