ಕರಾವಳಿ

Menstrual cup: ‘ಮೈತ್ರಿ ಮುಟ್ಟಿನ ಕಪ್ ಯೋಜನೆ’ಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ;ಚಿತ್ರನಟಿ ಸಪ್ತಮಿ ಗೌಡ ಭಾಗಿ

256

ನ್ಯೂಸ್ ನಾಟೌಟ್ : ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನ ನೆಹರೂ ಮೈದಾನದಲ್ಲಿ ಚಾಲನೆ ನೀಡಿದರು.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು ಹದಿಹರೆಯದವರಲ್ಲಿ ಮುಟ್ಟಿನ ವೈಜ್ಞಾನಿಕ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲ್ಪಟ್ಟಿತು.

ಮರು ಬಳಕೆಯ ಹಾಗೂ ಪರಿಸರ ಸ್ನೇಹಿ ಸಾಧನವಾದ ಮುಟ್ಟಿನ ಕಪ್‌ಗಳನ್ನು ಉಚಿತವಾಗಿ ಒದಗಿಸುವ ಉದ್ದೇಶ ಇದು ಹೊಂದಿದ್ದು,ಪರಿಸರ ಸ್ನೇಹಿ ಸಾಧನಗಳ ಬಳಕೆ ಮುಖಾಂತರ ಸ್ಯಾನಿವೇಸ್ಟ್ (ಘನ ತ್ಯಾಜ್ಯ) ಪ್ರಮಾಣ ತಗ್ಗಿಸುವ ಆಶಯವನ್ನು ಇದು ಹೊಂದಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಮೈತ್ರಿ ಮುಟ್ಟಿನ ಕಪ್ ಯೋಜನೆ’ಯು ಲಕ್ಷಾಂತರ ವಿದ್ಯಾರ್ಥಿನಿಯರಿಗೆ,ಯುವತಿಯರಿಗೆ ಹಾಗೂ ಮಹಿಳೆಯರಿಗೆ ಪ್ರಯೋಜನಕ್ಕೆ ಬರಲಿದೆ.ಕಾರ್ಯಕ್ರಮದಲ್ಲಿ ಚಿತ್ರನಟಿ ಸಪ್ತಮಿ ಗೌಡ, ಪುತ್ತೂರು ಶಾಸಕ ಅಶೋಕ್ ರೈ ಸೇರಿ ನಾಯಕರು, ಅಧಿಕಾರಿಗಳು, ಸಾವಿರಾರು ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಭಾಗಿಯಾಗಿದ್ದರು.

See also  ಮಾಜಿ ಸಿಎಂ ಸದಾನಂದ ಗೌಡರನ್ನು ತರಾಟೆಗೆ ತೆಗೆದುಕೊಂಡ ಮೃತ ಪ್ರವೀಣ್ ಪತ್ನಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget