ಕರಾವಳಿಕೊಡಗುಸುಳ್ಯ

ಕಡಬ:ಇಬ್ಬರನ್ನು ಬಲಿ ಪಡೆದ ರೆಂಜಿಲಾಡಿಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷ ,ದೊಡ್ಡ ಆನೆಯೊಂದಿಗೆ ಸಂಚರಿಸುತ್ತಿರುವ ಮರಿಯಾನೆ-ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಕಡಬ ತಾಲೂಕಿನ ರೆಂಜಿಲಾಡಿಯ ಸಮೀಪ ಫೆ.20ರಂದು ರಮೇಶ್ ರೈ ಹಾಗು ರಂಜಿತಾ ಎಂಬುವವರನ್ನು ಬಲಿ ಪಡೆದುಕೊಂಡಿದ್ದ ಕಾಡಾನೆಯನ್ನು ಸೆರೆ ಹಿಡಿದ ಬಳಿಕ ಇದೀಗ ಅದೇ ಪ್ರದೇಶದಲ್ಲಿ 2 ಕಾಡಾನೆಗಳು ಕಾಣಿಸಿಕೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.ಆ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಆನೆಗಳು ಪ್ರತ್ಯಕ್ಷವಾಗುತ್ತಿದ್ದು, ಆ ಭಾಗದ ಜನರು ಭಯಭೀತರಾಗಿದ್ದಾರೆ.

ರೆಂಜಿಲಾಡಿ ಗ್ರಾಮದ ಕಾನದಬಾಗಿಲಿನಲ್ಲಿ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ರವಿವಾರ ಸಂಜೆ ಮರಿ ಆನೆಯೊಂದಿಗೆ ದೊಡ್ಡ ಆನೆ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿರು ವುದಾಗಿ ತಿಳಿಸಿದ್ದಾರೆ. ಆನೆಗಳು ಸಾಗುತ್ತಿರುವ ವೀಡಿಯೋ ವೈರಲ್‌ ಆಗಿದೆ.

Related posts

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ದಿ.ಡಾ.ಕುರುಂಜಿ ವೆಂಕಟರಮಣ ಗೌಡರ ಪುಣ್ಯಸ್ಮರಣೆ, ಮಾತೃ ಸಂಸ್ಥೆಯಲ್ಲಿ ಪೂಜ್ಯರಿಗೆ ಪುಷ್ಪನಮನ

ಮಂಗಳೂರು ಮೂಲದ ಈ ಸ್ಟಾರ್ ನಟಿಗೆ ನಟನ ಪುತ್ರನಿಂದ ಟಾರ್ಚರ್..! ಶೂಟಿಂಗ್ ಬಿಟ್ಟು ಬಾ ನಿನಗೆ ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಎಂದದ್ಯಾರು?

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಳ್ಳ ಹಿಡಿಯುವುದೇ..? ಹಲವು ಮಂದಿಯ ಸರಣಿ ಬಂಧನಗಳ ಬಳಿಕ ಏನಾಗುವುದು ಈ ಕೇಸ್ ..? ಇಲ್ಲಿದೆ ಸಂಭವನೀಯ ಸಾಧ್ಯತೆಗಳ ವಿವರಣೆ