ಕರಾವಳಿ

ಸುಳ್ಯ:ಮನೆಯಲ್ಲಿ ಯುವತಿಯೊಬ್ಬಳೇ ಇದ್ದಾಗ ಬಟ್ಟೆ ವ್ಯಾಪಾರಕ್ಕೆ ಬಂದಿದ್ದ ಯುವಕನಿಂದ ಅನುಚಿತ ವರ್ತನೆ ಆರೋಪ:

151

ನ್ಯೂಸ್‌ ನಾಟೌಟ್‌: ಮನೆಯಲ್ಲಿ ಯುವತಿಯೊಬ್ಬಳೇ ಇದ್ದ ಸಮಯದಲ್ಲಿ ಬಟ್ಟೆ ವ್ಯಾಪಾರಕ್ಕೆಂದು ಬಂದಿದ್ದ ಯುವಕನೋರ್ವ ಆಕೆ ಜತೆ ಅನುಚಿತವಾಗಿ ವರ್ತಿಸಿದ ಘಟನೆ ಬಗ್ಗೆ ವರದಿಯಾಗಿದೆ.ಸುಳ್ಯದ ಅಮರಪಡ್ನೂರಿನ ಜೋಗಿಯಡ್ಕ ಎಂಬಲ್ಲಿ ಕೆಲ ದಿನಗಳ ಹಿಂದೆ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಯುವಕ ಮನೆ ಕಡೆಗೆ ಬಂದು ಬಟ್ಟೆ ಖರೀದಿಸುವಂತೆ ಒತ್ತಾಯಿಸಿದ್ದಾನೆ. ಬಳಿಕ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಭಾಗದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುವ ಯುವಕರ ತಂಡ ಬಟ್ಟೆಗಳನ್ನು ಬೈಕಿನಲ್ಲಿರಿಸಿಕೊಂಡು ಮನೆ ಮನೆಗೆ ಬಂದು ವ್ಯಾಪಾರ ಮಾಡುತ್ತಿದ್ದರು.ಹೀಗೆ ಯುವಕನೊಬ್ಬ ಜೋಗಿಯಡ್ಕ ಪರಿಸರದಲ್ಲಿ ಇರುವ ಮನೆಗೆ ಬಂದು ಬಟ್ಟೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಮನೆಯಲ್ಲಿ ಯುವತಿ ಓರ್ವಳೇ ಇರುವುದನ್ನು ಗಮನಿಸಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.ಈ ಬಗ್ಗೆ ಯುವತಿಯು ಮನೆಯವರಿಗೆ ತಿಳಿಸಿದ್ದು, ಅದೇ ಯುವಕರ ತಂಡ ಮತ್ತೊಮ್ಮೆ ಚೊಕ್ಕಾಡಿ ರಸ್ತೆಯಲ್ಲಿ ಬಂದಾಗ ಸ್ಥಳೀಯ ಯುವಕರು ಸೇರಿ ಅವರಲ್ಲಿ ವಿಚಾರಿಸಿ ಮೂರು ಮಂದಿಗೂ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.ನಂತರ ಯುವಕರು ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಿರುವುದಾಗಿ ತಿಳಿದು ಬಂದಿದೆ.

See also  ಗೋಳಿತೊಟ್ಟು ರಸ್ತೆಯಲ್ಲಿ ತಡರಾತ್ರಿ ಕಾಡಾನೆ ವಾಕಿಂಗ್..! ರಾತ್ರಿ ಸಂಚರಿಸುವ ನಾಗರೀಕರೇ ಎಚ್ಚರ..ಎಚ್ಚರ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget