ಕರಾವಳಿಸುಳ್ಯ

ಸುಳ್ಯ:ವೇಣೂರು ಬಳಿ ಭೀಕರ ಪಟಾಕಿ ಸ್ಪೋಟ ಪ್ರಕರಣ‌:ಆರೋಪಿ ಸುಳ್ಯದಲ್ಲಿ ಬಂಧನ..!ಪಟಾಕಿ ತಯಾರಿಕಾ ಘಟಕಕ್ಕೆ ಅನುಮತಿಯಿದ್ದರೂ ಸೈಯದ್ ಬಶೀರ್ ಬಂಧನವಾಗಿದ್ದೇಕೆ?ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌..

ನ್ಯೂಸ್‌ ನಾಟೌಟ್‌: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ವೇಣೂರು ಬಳಿ ಭೀಕರ ಪಟಾಕಿ ಸ್ಪೋಟ ಪ್ರಕರಣ‌ಕ್ಕೆ ಸಂಬಂಧ ಪಟ್ಟ ಹಾಗೆ ಪರಾರಿಯಾಗಿದ್ದ ಆರೋಪಿ ಸೈಯದ್ ಬಶೀರ್ ನನ್ನು ಪೊಲೀಸರು ಸುಳ್ಯದಲ್ಲಿ ವಶಕ್ಕೆ ಪಡೆದಿದ್ದಾರೆ. ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಗ್ರಾಮದ ಕಡ್ತ್ಯಾರು ಪಟಾಕಿ ತಯಾರಿಕಾ ಗೋಡೌನ್ ನಲ್ಲಿ ಪಟಾಕಿ ತಯಾರಿಕೆ ವೇಳೆ ಜ.28 ರಂದು ಸಂಜೆ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದರು.

ಘಟನೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇರೆಗೆ ಸುಡುಮದ್ದು ತಯಾರಿಕಾ ಘಟಕದ ಮಾಲೀಕ ಬಶೀರ್‌ ಮೇಲೆ ದೂರು ದಾಖಲಾಗಿತ್ತು.ಪ್ರಕರಣ ಸಂಬಂಧ ಪಟ್ಟ ಜಾಗ ಹಾಗೂ ಪಟಾಕಿ ತಯಾರಿಕಾ ಮಾಲೀಕ ಸೈಯದ್ ಬಶೀರ್ ಘಟನೆ ಬಳಿಕ ವೇಣೂರಿನಿಂದ ಪರಾರಿಯಾಗಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ನೇತೃತ್ವದಲ್ಲಿ ಸುಳ್ಯದಲ್ಲಿ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ.ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರ ದೇಹ ಛಿದ್ರವಾಗಿತ್ತು. ರವಿವಾರ ಮಧ್ಯರಾತ್ರಿ ವರೆಗೂ ಶೋಧಕಾರ್ಯ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ, ಫೋರೆನಿಕ್ಸ್ ತಂಡ ದೇಹದ ಭಾಗಗಳನ್ನು ಪತ್ತೆಹಚ್ಚಿದೆ‌.

ಪಟಾಕಿ ತಯಾರಿಕಾ ಘಟಕಕ್ಕೆ ಎಸ್.ಪಿ. ಕಚೇರಿಯಿಂದ ಅನುಮತಿ ಪಡೆದಿದ್ದರೂ ಕೂಡ, ಫೈರ್ ಆ್ಯಂಡ್ ಸೇಫ್ಟಿ ವಿಚಾರವಾಗಿ ಅಗ್ನಿಶಾಮಕದಳದಿಂದ ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಹೀಗಿದ್ದರೂ ಪಟಾಕಿ ಗೋದಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಅನುಮತಿ ನೀಡಿದ್ದಾದರು ಹೇಗೆ? ಸ್ಥಳದಲ್ಲಿ ದೊರೆತ ಬಾಂಬ್ ರೂಪ್ ವಸ್ತುಗಳ ತಯಾರಿಗೆ ಅನುಮತಿ ಇತ್ತೇ ? ಪರಿಣತರಲ್ಲದ ಕಾರ್ಮಿಕರನ್ನು ಬಳಸಿ  ಕೃತ್ಯ ನಡೆಸಲಾಗುತ್ತಿತ್ತೇ ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ಮಾಹಿತಿ ಹೊರಬರಬೇಕಿದೆ.

ಬೆಳ್ತಂಡಿ ಸಮೀಪ ಪಟಾಕಿ ಗೋಡಾನ್‌ನಲ್ಲಿ ಪಟಾಕಿ ತಯಾರಿಕೆ ವೇಳೆ ನಿನ್ನೆ ಸಂಜೆ ವೇಳೆ ಸ್ಪೋಟ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಪಟಾಕಿ ತಯಾರಿಕಾ ಘಟಕದ ಮಾಲಕ ಸಯ್ಯದ್ ಬಶೀರ್‌ರವರು ಪರಾರಿಯಾಗಿದ್ದರು.ಒಟ್ಟು ಐದು ಬಾರಿ ಭಾರೀ ಸ್ಫೋಟ ಸಂಭವಿಸಿತ್ತು.ಸ್ಫೋಟ ಆಗುತ್ತಿದ್ದಂತೆಯೇ ಕಣ್ಣು ಮಂಜಾಗಿದ್ದು,ಮನೆಯ ಶೀಟ್ ಗಳು ಮುರಿದು ಕೆಳಗೆ ಬಿತ್ತು.ಘಟನೆಯಲ್ಲಿ ಮೂವರು ದುರಂತ ಅಂತ್ಯ ಕಂಡಿದ್ದರು.ಮಾತ್ರವಲ್ಲ ದೇಹವೆಲ್ಲ ಛಿದ್ರ ಛಿದ್ರವಾಗಿದ್ದು ಗುರುತೇ ಸಿಗದೇ ಹಾಗೆ ಪ್ರಾಣ ಹಾನಿಯಾಗಿತ್ತು.

ಈ ಸಂದರ್ಭ ಖಚಿತ ಮಾಹಿತಿ ಮೇರೆಗೆ ಕಲ್ಲಗುಂಡಿ ಸಮೀಪ ಸುಳ್ಯ ಪೋಲಿಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ನೇತೃತ್ವದ ತಂಡ ಬಂಧಿಸಿ ಹೆಚ್ಚಿನ ವಿಚಾರಣೆಗೆ ವೇಣೂರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.

https://www.youtube.com/watch?v=1JnHTxLJRGA

Related posts

ಮಂಗಳೂರು:ಯುವತಿ ನಾಪತ್ತೆ,ಪತ್ತೆಯಾದಲ್ಲಿ ಮಾಹಿತಿ ನೀಡಲು ಮನವಿ

‘ಫಸ್ಟ್ ನೈಟ್’ ಬಳಿಕ ವಿಡಿಯೋ ಹಂಚಿಕೊಂಡ ದಂಪತಿ..!, ‘ಥೂ..ಮಾನಗೆಟ್ಟವರೇ’ ಎಂದು ಜಾಡಿಸಿದ ನೆಟ್ಟಿಗರು..! ವಿಡಿಯೋ ವೀಕ್ಷಿಸಿ

ಜೆಸಿಐ ಸುಳ್ಯ ಪಯಸ್ವಿನಿ ವತಿಯಿಂದ “ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ”,ತಾ. ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಗೆ ಸನ್ಮಾನ