ಕರಾವಳಿ

ಕಡಬ:ಬಲ್ಯ ದೇವಾಲಯದಿಂದ ಚಿನ್ನ,ಬೆಳ್ಳಿಯ ಆಭರಣ ದೋಚಿದ ಕಳ್ಳರು..!

ನ್ಯೂಸ್ ನಾಟೌಟ್ :ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದಿಂದ ಒಡವೆ ಹಾಗೂ ಸಿಸಿ ಕೆಮರಾ ಕಳವಾದ ಪ್ರಕರಣ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿರುವ ದೇಗುಲ ಇದಾಗಿದ್ದು ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ.

ದೇವಸ್ಥಾನದ ಅರ್ಚಕ ರವಿಪ್ರಸಾದ್‌ ಭಟ್‌ ಅವರು ಬೆಳಗ್ಗೆ ದೇವಸ್ಥಾನಕ್ಕೆ ಬಂದಿದ್ದರು. ಎಂದಿನಂತೆ ಬಾಗಿಲು ತೆರೆಯಲು ಮುಂದಾದರು.ಈ ವೇಳೆ ದೇವಸ್ಥಾನದ ಮುಖ್ಯ ಬಾಗಿಲಿನ ಚಿಲಕ ಹಾನಿಗೀಡಾಗಿರುವುದರ ಬಗ್ಗೆ ಗಮನಕ್ಕೆ ಬಂದಿದೆ.ಇದೇ ವೇಳೆ ದೇಗುಲದ ಒಳಗೆ ಹೋದ ಅರ್ಚಕರು ಗಾಬರಿಗೊಂಡಿದ್ದು, ಬಾಗಿಲು ಸರಿಸಿ ಪರಿಶೀಲಿಸಲಾಗಿ ಯಾರೋ ಒಳಪ್ರವೇಶಿಸಿರುವುದರ ಬಗ್ಗೆ ಗಮನಕ್ಕೆ ಬಂದಿದೆ.

ದೇವರ ಮೂರ್ತಿಗೆ ಹಾಕಲಾಗಿದ್ದ 35000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಹಾಗೂ ದೇವಸ್ಥಾನಕ್ಕೆ ಅಳವಡಿಸಿದ ಅಂದಾಜು 36,000 ರೂ. ಮೌಲ್ಯದ ಸಿಸಿ ಕೆಮರಾದ ಡಿವಿಆರ್‌ ,ಹಾರ್ಡ್‌ಡಿಸ್ಕ್ ಹಾಗೂ ಟಿವಿ ಮಾನಿಟರ್‌ ಅನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ರವಿಪ್ರಸಾದ್‌ ಭಟ್‌ ನೀಡಿದ ದೂರಿನಂತೆ ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ?

ದೇವಸ್ಥಾನದ ಅರ್ಚಕ ರವಿಪ್ರಸಾದ್‌ ಭಟ್‌ ಅವರು ಬೆಳಗ್ಗೆ ದೇವಸ್ಥಾನಕ್ಕೆ ಬಂದಿದ್ದರು. ಎಂದಿನಂತೆ ಬಾಗಿಲು ತೆರೆಯಲು ಮುಂದಾದರು.ಈ ವೇಳೆ ದೇವಸ್ಥಾನದ ಮುಖ್ಯ ಬಾಗಿಲಿನ ಚಿಲಕ ಹಾನಿಗೀಡಾಗಿರುವುದರ ಬಗ್ಗೆ ಗಮನಕ್ಕೆ ಬಂದಿದೆ.

Related posts

ಕೇಸ್ ಸಂಬಂಧ ಬಿಗ್ ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ..! ವಾರಂಟ್​ ಜಾರಿಯಾದ ಹಿನ್ನೆಲೆ ಕೋರ್ಟ್ ಗೆ ಹಾಜರಾದ ಚೈತ್ರಾ

ಬಾಳುಗೋಡು: ಎಚ್ಚರ ತಪ್ಪಿದ್ರೆ ಜೀವಕ್ಕೇ ಅಪಾಯ, ಜನ ಸಂಚಾರದ ವೇಳೆಯೇ ಸಂಭವಿಸಬಹುದು ದುರಂತ ..!

ದಾಸ್ ಪ್ರಮೋಷನ್ಸ್ ಹೋಮ್ ಹೆಲ್ತ್‌ಕೇರ್ ಪ್ರೈ.ಲಿ. ಸಂಸ್ಥೆಯಿಂದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ಗೆ ಅಭಿನಂದನೆ