ಕರಾವಳಿ

ಚಪ್ಪಲಿ ಕಳೆದುಹೋಗಿದೆಯೆಂದು 112ಗೆ ಕರೆ ಮಾಡಿದ ಯುವಕ..!,ಸ್ಥಳಕ್ಕಾಗಮಿಸಿದ ಪೊಲೀಸರು..ಮುಂದೆನಾಯ್ತು?

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬನ ಚಪ್ಪಲಿ ಕಳವಾಗಿದ್ದು,ಆತ ೧೧೨ಗೆ ಕಾಲ್ ಮಾಡಿದ ಘಟನೆ ಮಂಗಳೂರಿನಿಂದ ವರದಿಯಾಗಿದೆ.ಏನೋ ಗಂಭೀರ ಘಟನೆಯೆಂದು ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ರೆ ಯುವಕ ಚಪ್ಪಲಿ ಕಾಣೆಯಾಗಿರುವ ಬಗ್ಗೆ ತಿಳಿಸಿದ್ದಾನೆ.ಜತೆಗೆ ಪೊಲೀಸರೊಂದಿಗೂ ಹುಡುಕಾಡಿಸಿದ ಸುದ್ದಿ ಬೆಳಕಿಗೆ ಬಂದಿದೆ.

ಸಭಾಂಗಣದ ಹೊರಗೆ ಇಟ್ಟಿದ್ದ ಚಪ್ಪಲಿ ಕಳವಾದ ಬಗ್ಗೆ ವ್ಯಕ್ತಿಯೊಬ್ಬ 112 ತುರ್ತು ಸ್ಪಂದನಕ್ಕೆ ಕರೆ ಮಾಡಿದ್ದಾನೆ.ಯುವಕನೋರ್ವ ಶರವು ದೇವಸ್ಥಾನ ಸಮೀಪದ ಸಭಾಂಗಣಕ್ಕೆ ಬಂದಿದ್ದು, ಒಳಗೆ ಹೋಗುವಾಗ ತೆಗೆದಿಟ್ಟಿದ್ದ ಚಪ್ಪಲಿ ಹೊರಗೆ ಬರುವಾಗ ಇರಲಿಲ್ಲ. ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ ಕೊನೆಗೆ 112 ಗೆ ಕರೆ ಮಾಡಿದ್ದಾನೆ.

ಏನೋ ಗೊಂದಲ ಆಗಿರಬಹುದೆಂದು ಪೊಲೀಸರು ಸ್ಥಳಕ್ಕೆ ಆಗಮಿಸಿದರೆ ಚಪ್ಪಲಿ ಕಳವಾಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ಚಪ್ಪಲಿಗಾಗಿ ಹುಡುಕಾಡಿದರು ಪ್ರಯೋಜನವಾಗಲಿಲ್ಲ.

Related posts

ಸುಬ್ರಹ್ಮಣ್ಯ:ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ,ಸ್ಥಳಕ್ಕಾಗಮಿಸಿದ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ

ಮಾಜಿ ಸಿಎಂ ಸದಾನಂದ ಗೌಡ ಭೂಮಿ ಮೇಲಿದ್ದಾರಾ..?

ಜಾತ್ರೆ ಅಂಗಡಿಗಳಿಗೆ ಶರತ್ ಪಂಪ್ ವೆಲ್ ಕೇಸರಿ ಧ್ವಜ ನೆಟ್ಟದ್ದೇಕೆ? ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕೆ? ಇಲ್ಲಿದೆ ವಿಡಿಯೋ