ಕರಾವಳಿ

ನೆಲ್ಯಾಡಿ: ವಾಟ್ಸಾಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ,ತಂದೆ-ತಾಯಿ ಸಹಿತ ಮೂರು ವರ್ಷಗಳ ಹಿಂದೆ ತಮ್ಮನನ್ನೂ ಕಳೆದುಕೊಂಡಿದ್ದ ಯುವಕ

ನ್ಯೂಸ್ ನಾಟೌಟ್ : ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಇಚಿಲಂಪಾಡಿಲ್ಲಿ ತಡರಾತ್ರಿ ನಡೆದಿದೆ.ಈತ ವಾಟ್ಸ್ಯಾಪ್ ಸ್ಟೇಟಸ್ ಹಾಕಿದ ಬಳಿಕ ಈ ಕೃತ್ಯ ನಡೆಸಿದ್ದು ಮೃತ ಯುವಕನನ್ನು ರೆನೀಶ್ (27) ವರ್ಷ ಎಂದು ಗುರುತಿಸಲಾಗಿದೆ.

ಮೃತ ರೆನೀಶ್ ಪ್ರೀತಿಯ ತಮ್ಮ ಕಳೆದ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ತಂದೆ ತಾಯಿ ಕೂಡ ಮರಣ ಹೊಂದಿದ್ದರು.ಈ ಮಧ್ಯೆ ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ. ವಿದ್ಯುತ್ ಲೈನ್ ಗೆ ಹೋಗುವ ಕಾಯಕ ಮಾಡುತ್ತಿದ್ದ. ನಿನ್ನೆಯೂ ಕೂಡ ಕೆಲಸಕ್ಕೆ ಹೋಗಿದ್ದ ಎಂದು ತಿಳಿದು ಬಂದಿದೆ.

ಇತ್ತ ತಂದೆ-ತಾಯಿ ಇಲ್ಲದ ನೋವು, ತಮ್ಮನನ್ನು ಕಳೆದು ಕೊಂಡ ದುಖಃ ಇದೆಲ್ಲದರಿಂದ ರೆನೀಶ್ ಒಬ್ಬಂಟಿಯಾಗಿದ್ದರಿಂದ ಮಾನಸಿಕವಾಗಿಯೂ ನೊಂದಿದ್ದ ಎಂದು ಹೇಳಲಾಗಿದೆ. ಕಳೆದ ರಾತ್ರಿ ರೆನೀಶ್ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್ ನ ಸ್ಟೇಟಸ್ ನಲ್ಲಿ ಬರೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ ನಾಯ್ಕ ಸೇರಿದಂತೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಶರೀರವನ್ನು ಉಪ್ಪಿನಂಗಡಿಯ ಶವಾಗಾರಕ್ಕೆ ಸಾಗಿಸಲಾಗಿದೆ.

Related posts

ಹೂವಿನ ಗಿಡ ತಿಂದಿದ್ದಕ್ಕೆ ಗೋಮಾತೆಯ ಕಣ್ಣನ್ನೇ ಕಿತ್ತ ರಾಕ್ಷಸ

ಸುಳ್ಯ:ಕುರುಂಜಿಭಾಗ್ ಬಳಿ ಬೈಕ್-ಸ್ಕೂಟಿ ನಡುವೆ ಭೀಕರ ಅಪಘಾತ,ಗಂಭೀರ ಗಾಯಗೊಂಡ ವಿದ್ಯಾರ್ಥಿಗೆ ಮಂಗಳೂರಿನಲ್ಲಿ ಚಿಕಿತ್ಸೆ

ಆಟೋ ಪಾರ್ಕಿಂಗ್ ವಿಚಾರಕ್ಕೆ ಸುಕುಮಾರ್ ಮನೆಗೆ ನುಗ್ಗಿ ಹೊಡೆದ ಸೈಯದ್ ಸ್ನೇಹಿತರು..! ಭಗವಾ ಧ್ವಜ ಇದಕ್ಕೆ ಕಾರಣ ಎಂದ ಸ್ಥಳೀಯರು..!