ಕರಾವಳಿಮಂಗಳೂರು

ಕರಾವಳಿಯಲ್ಲಿ ಅಪರೂಪದ ಕರಿಚಿರತೆ..! ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ

233

ನ್ಯೂಸ್ ನಾಟೌಟ್: ಅಪರೂಪವಾಗಿರುವ ಕರಿಚಿರತೆ ಬಾವಿಗೆ ಬಿದ್ದಿರುವ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವಿನ ಗೊಸ್ಪೆಲ್ ಸನಿಲ ಎಂಬಲ್ಲಿ ಭಾನುವಾರ(ಮಾ.31) ನಡೆದಿದೆ.

ಇಲ್ಲಿನ ಶಕುಂತಳ ಆಚಾರ್ಯ ಎಂಬವರ ಮನೆಯ ಬಾವಿಗೆ ಕರಿಚಿರತೆಯು ಬಿದ್ದಿದ್ದು, ಭಾನುವಾರ ಬೆಳಗ್ಗೆ ಬಾವಿಯಿಂದ ನೀರು ಸೇದಲೆಂದು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ತಲುಪಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಯಶಸ್ವಿ ಕಾರ್ಯಾಚರಣೆ ನಡೆಸಿ ಕರಿ ಚಿರತೆಯನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸ್ಥಳೀಯರ ಸಹಕಾರದೊಂದಿಗೆ ಬೆಳಗ್ಗೆಯೇ ಕಾರ್ಯಾಚರಣೆ ಪ್ರಾರಂಭಿಸಿದರು. ಮಧ್ಯಾಹ್ನದ ವೇಳೆಗೆ ಚಿರತೆಯನ್ನು ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಕಾರ್ಯಾಚರಣೆಗಾಗಿ ಬಾವಿಯ ಸುತ್ತ ಬಲೆ ಹಾಕಲಾಗಿದ್ದು, ಬಾವಿಗೆ ಏಣಿಯನ್ನು ಇಳಿಸಲಾಗಿತ್ತು. ಬಾವಿಯ ದಂಡೆಯ ಸಮೀಪ ಚಿರತೆಯನ್ನು ಸೆರೆ ಹಿಡಿಯಲು ಬೋನನ್ನು ಇಡಲಾಗಿತ್ತು. ಬಾವಿಗೆ ಬಿದ್ದ ಚಿರತೆಯನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿರತೆ ನೋಡಲೆಂದು ಕಾತುರದಿಂದ ಕಾಯುತ್ತಿದ್ದರು. ಎಡಪದವು ಪರಿಸರದ ಬೋರುಗುಡ್ಡೆ ಎಂಬಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯ ಉಪಟಳದಿಂದ ಜನ ಕಂಗೆಟ್ಟಿದ್ದು, ಹಲವು ಮನೆಗಳ ಸಾಕು ನಾಯಿಗಳು ಹಾಗೂ ದನಗಳು ಚಿರತೆಗೆ ಆಹಾರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕರಾವಳಿ ಪ್ರದೇಶವಾಗಿರುವ ಮಂಗಳೂರು ಪರಿಸರದಲ್ಲಿ ಚಿರತೆಗಳು ಕಾಣಸಿಗುವುದು ಬಹಳ ವಿರಳ. ಇದೀಗ ಕರಿಚಿರತೆ ಕಂಡು ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

See also  ಉಡುಪಿ: ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಸಾವನ್ನಪ್ಪುತ್ತಿದ್ದಂತೆ, ಹಾಸ್ಪಿಟಲ್ ಹೊರಗಿದ್ದ ಮಗನೂ ಸಾವು..! ಮಗನ ಸಾವಿನ ಹಿಂದಿದೆ ಹಲವು ಅನುಮಾನ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget