ಬೆಂಗಳೂರು

ಅಮೆರಿಕ ಆತಿಥ್ಯದ ಕರಾಟೆ ಚಾಂಪಿಯನ್ ಶಿಪ್‌: ಬೆಂಗಳೂರಿನ ಚೈತ್ರಾಶ್ರೀ ಗೆ ಚಿನ್ನ, ಕಂಚು

1.3k

ಬೆಂಗಳೂರು: ರಾಜ್ಯದ ಉದಯೋನ್ಮುಖ ಕರಾಟೆ ಪಟು ಚೈತ್ರಾಶ್ರೀ ಅಮೆರಿಕದಿಂದ ಆಯೋಜಿಸಲಾಗಿದ್ದ ವೇ ಆಫ್‌ ದಿ ವಾರಿಯರ್ ವರ್ಚುವಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಒಂದು ಚಿನ್ನ ಹಾಗೂ ಮತ್ತೊಂದು ಕಂಚಿನ ಪದಕ ಪಡೆದಿದ್ದಾರೆ. ಕಟಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಚೈತ್ರಾಶ್ರೀ ಎಂಟರ್‌ ಟೈನ್ ಮೆಂಟ್‌ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಚೈತ್ರಾ ಶ್ರೀ ಈ ಹಿಂದೆ ಇಂಟರ್ ನ್ಯಾಷನಲ್‌ ಬುಕ್‌ ಆಫ್‌ ದಿ ರೆಕಾರ್ಡ್ ಮಾಡಿದ್ದರು. ಲಾಕ್‌ ಡೌನ್‌ ಅವಧಿಯಲ್ಲಿ ಚೈತ್ರಾಶ್ರೀ 125 ದಿನಗಳಲ್ಲಿ 68 ಸರ್ಟಿಫಿಕೇಟ್ಗಳನ್ನು ಗೆದ್ದಿದ್ದರು. ಚೈತ್ರಾ ಶ್ರೀ ಬೆಂಗಳೂರಿನ ಓಕಳಿಪುರ ಮೂಲದವರು. ರಾಜಾಜಿನಗರದ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಅಭ್ಯಾಸ ನಡೆಸುತ್ತಿದ್ದಾರೆ. ಹಲವಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚೈತ್ರಾಶ್ರೀ ಪದಕ ಗೆದ್ದಿದ್ದಾರೆ.

See also  BMTC ಬಸ್‌ ನಲ್ಲಿ ಮಹಿಳೆಗೆ ಸಹ ಪ್ರಯಾಣಿಕನಿಂದ ಲೈಂಗಿಕ ಕಿರುಕುಳ..! ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget