Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಕರಾಚಿಯಲ್ಲಿ ಸರಣಿ ಭೂಕಂಪಕ್ಕೆ ಹೆದರಿ ಕೈದಿಗಳ ಸ್ಥಳಾಂತರ..! 216 ಕೈದಿಗಳು ಪರಾರಿ..!

288

ನ್ಯೂಸ್ ನಾಟೌಟ್: ಕಳೆದ 24 ಗಂಟೆಯಲ್ಲಿ ಪಾಕಿಸ್ತಾನದ ಹಲವೆಡೆ ಸಣ್ಣ ಪ್ರಮಾಣದ ಭೂಕಂಪಗಳು ಸಂಭವಿಸಿದೆ. ಈ ವೇಳೆ ಅಲ್ಲಿಂದ ಜೈಲಿನಲ್ಲಿದ್ದ ಕೈದಿಗಳ ರಕ್ಷಣೆಗಾಗಿ ಅವರನ್ನು ಬೇರೆಡೆ ಸ್ಥಳಾಂತರಿಸುವಾಗ 200ಕ್ಕೂ ಅಧಿಕ ಅಪರಾಧಿಗಳು ತಪ್ಪಿಸಿಕೊಂಡಿದ್ದಾರೆ.

ಕರಾಚಿಯ ಮಾಲಿರ್ ಜೈಲ್ ನಲ್ಲಿ ಸೋಮವಾರ ರಾತ್ರಿ(ಜೂ.2) ಈ ಘಟನೆ ನಡೆದಿದೆ. ಕೈದಿಗಳು ಜೈಲಿನಿಂದ ತಪ್ಪಿಸಿಕೊಳ್ಳುವಾಗ ಒಬ್ಬ ಕೈದಿ ಸಾವನ್ನಪ್ಪಿದ್ದಾನೆ. ಅವರನ್ನು ತಡೆಯಲು ಮುಂದಾದ ಮೂವರು ಪ್ಯಾರಾಮಿಲಿಟರಿ ಮತ್ತು ಒಬ್ಬ ಜೈಲು ಸಿಬ್ಬಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕರಾಚಿ ಸೇರಿದಂತೆ ವಿವಿಧೆಡೆ ಭೂಕಂಪನ ಸಂಭವಿಸಿದೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜೈಲಿನ ಬ್ಯಾರಕ್ ​ಗಳಲ್ಲಿದ್ದ ಕೈದಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೇ ಬಳಸಿಕೊಂಡ 216 ಅಪರಾಧಿಗಳು ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಕಳೆದ 24 ಗಂಟೆಗಳಲ್ಲಿ ಕರಾಚಿಯಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ. ಕಂಪನದ ಸಮಯದಲ್ಲಿ 600ಕ್ಕೂ ಹೆಚ್ಚು ಕೈದಿಗಳನ್ನು ಅವರ ಬ್ಯಾರಕ್‌ ಗಳಿಂದ ಹೊರಗೆ ಕರೆದೊಯ್ಯಲಾಯಿತು. ಅಪರಾಧಿಗಳು ಸಾಗಿಸುವಾಗಿನ ಅವ್ಯವಸ್ಥೆಯಿಂದ 216 ಕೈದಿಗಳು ಪರಾರಿಯಾಗಿದ್ದಾರೆ. ಅದರಲ್ಲಿ 80 ಕೈದಿಗಳನ್ನು ಮರಳಿ ವಶಕ್ಕೆ ಪಡೆಯಲಾಗಿದೆ” ಎಂದು ಜೈಲು ಸೂಪರಿಂಟೆಂಡೆಂಟ್ ಅರ್ಷದ್ ಶಾ ಹೇಳಿದ್ದಾರೆ.

“ಇನ್ನೂ 135ಕ್ಕೂ ಹೆಚ್ಚು ಕೈದಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯಗಳು ಮುಂದುವರೆದಿವೆ. ಪರಾರಿಯಾದವರ ಪತ್ತೆಗೆ ಹಿರಿಯ ಪೊಲೀಸ್​ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಹವಾಮಾನ ಇಲಾಖೆಯ (ಪಿಎಂಡಿ) ಭೂಕಂಪನ ಮಾನಿಟರಿಂಗ್ ಸೆಂಟರ್ ಪ್ರಕಾರ, ಕರಾಚಿಯಲ್ಲಿ ಭಾನುವಾರದಿಂದ 16 ಲಘು ಭೂಕಂಪಗಳು ಸಂಭವಿಸಿವೆ.

ದನಗಳಿಗೆ ಮೇವು ತರಲು ಮನೆಯಿಂದ ಹೋದವಳು ಮತ್ತೆ ಬರಲೇ ಇಲ್ಲ..! ಹೊಲದಲ್ಲಿ ಪ್ರೇಯಸಿಗೆ ಸ್ಕ್ರೂಡ್ರೈವರ್ ​​ನಿಂದ 18 ಬಾರಿ ಇರಿದು ಕೊಂದ ಪ್ರೇಮಿ..!

See also  ಶೋಭಾ ಪರ ಬಿಎಸ್ ವೈ ಬ್ಯಾಟಿಂಗ್ ಬೆನ್ನಲ್ಲೇ ಸಿ.ಟಿ ರವಿ ಅಭಿಮಾನಿಗಳಿಗೆ ಶಾಕ್..! ಗೋ ಬ್ಯಾಕ್​ ಶೋಭಾ ಕರಂದ್ಲಾಜೆ ಪೋಸ್ಟರ್​ ಅಂಟಿಸಿವರ ವಿರುದ್ಧ ಎಫ್.ಐ.ಆರ್
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget