ಭಕ್ತಿಭಾವ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಿಷಭ್‌ ಶೆಟ್ಟಿ ಭೇಟಿ

485

ನ್ಯೂಸ್ ನಾಟೌಟ್: ಕಾಂತಾರ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ನಟ, ನಿರ್ದೇಶಕ ರಿಷಭ್ ಶೆಟ್ಟಿ ಫುಲ್ ಖುಷಿಯಲ್ಲಿದ್ದಾರೆ. ಖುಷಿಯಲ್ಲಿ ಅವರು ಯಶಸ್ಸಿಗೆ ಪ್ರೇರಣೆಯಾಗಿರುವ ದೈವ – ದೇವರನ್ನು ಮರೆತ್ತಿಲ್ಲ.

ರಿಷಭ್ ಶೆಟ್ಟಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ದೈವ ಸ್ಥಾನ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ಧರ್ಮಸ್ಥಳದಿಂದ ಆರಂಭವಾದ ಯಾತ್ರೆ ಇದೀಗ ಹಲವು ದೇವಸ್ಥಾನ ಸುತ್ತಿದ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಅಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಹಾಗೂ ಕುಟುಂಬಸ್ಥರು ರಿಷಭ್ ಶೆಟ್ಟಿ ಜತೆಗೆ ಇದ್ದರು. ರಿಷಭ್ ಶೆಟ್ಟಿ ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಕೆಲವು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಇದನ್ನು ನಿಯಂತ್ರಿಸುವುದು ದೇವಸ್ಥಾನದ ಆಡಳಿತ ಮಂಡಳಿಗೆ ತುಸು ಕಷ್ಟದ ವಿಚಾರವಾಯಿತು.

See also  ಸಂಪಾಜೆ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೆಗೆ ಗೊನೆ ಕಡಿಯುವ ಮುಹೂರ್ತಕ್ಕೆ ಚಾಲನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget