ಕರಾವಳಿಕ್ರೀಡೆ/ಸಿನಿಮಾವೈರಲ್ ನ್ಯೂಸ್

Kantara-1: ರಿಷಬ್​ ಪತ್ನಿ ನಟಿಸಲಿದ್ದಾರಾ..? ಈ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು?

242

ನ್ಯೂಸ್ ನಾಟೌಟ್ : ಇಂದು (ನವೆಂಬರ್​ 27) ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಕಾಂತಾರ’ ಪ್ರೀಕ್ವೆಲ್​ಗೆ ಮುಹೂರ್ತ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರಗತಿ ಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿ ಚಿತ್ರದ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.

‘ಕಳೆದ ಬಾರಿಯಂತೆ ನಾನು ಈ ಬಾರಿ ಕೂಡ ಕಾಸ್ಟ್ಯೂಮ್​ ಡಿಸೈನರ್​ ಆಗಿ ಕೆಲಸ ಮಾಡುತ್ತೇನೆ. ರಿಷಬ್​ ಶೆಟ್ಟಿ ಜೊತೆ ನಾನು ಯಾವಾಗಲೂ ಇರುತ್ತೇನೆ. ನನಗೆ ಈ ಚಿತ್ರದಲ್ಲಿ ಪಾತ್ರ ಇದೆಯೋ ಇಲ್ಲವೋ ಎಂಬುದು ಇನ್ನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮುಂದೆ ರಿಷಬ್​ ಏನಾದರೂ ಹೇಳಿದರೆ ನನಗೆ ಸಿನಿಮಾದಲ್ಲಿ ಪಾತ್ರ ಇರಬಹುದು. ಸದ್ಯಕ್ಕೆ ನನ್ನ ಕಡೆಯಿಂದ ಕಾಸ್ಟ್ಯೂಮ್​ ಕೆಲಸಗಳು ಮಾತ್ರ ನಡೆಯುತ್ತಿವೆ’ ಎಂದು ಪ್ರಗತಿ ಶೆಟ್ಟಿ (Pragathi Shetty) ಹೇಳಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಮೂಲಕ ವಿಜಯ್​ ಕಿರಗಂದೂರು ಬಂಡವಾಳ ಹೂಡುತ್ತಿದ್ದು, ಕಾಂತಾರ 1 ಫಸ್ಟ್ ಲುಕ್ ಬಳಿಕ ಎಲ್ಲರಲ್ಲೂ ಮತ್ತುಷ್ಟು ಕುತೂಹಲ ಹೆಚ್ಚಾಗಿದೆ.

See also  KSRTC ಬಸ್ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ..! ಪ್ರಯಾಣಿಕರಿಗೆ ಗಂಭೀರ ಗಾಯ, ಜಿಲ್ಲಾಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget