ವೈರಲ್ ನ್ಯೂಸ್ಸಿನಿಮಾ

ಕಾಂತರದಲ್ಲಿ ರಿಷಬ್ ತಂದೆ ಪಾತ್ರಕ್ಕೆ ಮೋಹನ್ ​ಲಾಲ್..! ಕಾಂತರದಲ್ಲಿ ಕದಂಬರ ಕಾಲದ ಕಥೆ..!

218

ನ್ಯೂಸ್ ನಾಟೌಟ್: ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಈ ಸಿನಿಮಾ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಎನ್ನಲಾಗಿದೆ. ಇಡೀ ಚಿತ್ರದ ಕಥೆ ಕದಂಬರ ಕಾಲದಲ್ಲಿ ಸಾಗಲಿದೆ. ಕೆಲವು ವರದಿಗಳ ಪ್ರಕಾರ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಮೋಹನ್​ಲಾಲ್ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ.

ರಿಷಬ್ ತಂದೆಯ ಪಾತ್ರದಲ್ಲಿ ಮೋಹನ್ ​ಲಾಲ್ ನಟಿಸುತ್ತಾರೆ ಎನ್ನಲಾಗಿದೆ. ‘ಕಾಂತಾರ: ಚಾಪ್ಟರ್ 1’ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಚಿತ್ರಕ್ಕೆ ಹೊಸ ಹೊಸ ತಾರೆಯರು ಸೇರ್ಪಡೆ ಆಗುತ್ತಿದ್ದಾರೆ.

ಈ ಪೈಕಿ ಮೋಹನ್ ​ಲಾಲ್ ಕೂಡ ತಂಡ ಸೇರಿದ್ದಾರೆ ಎನ್ನಲಾಗುತ್ತಿದೆ. ಏಪ್ರಿಲ್​ನಲ್ಲಿ ರಿಷಬ್ ಮೋಹನ್​ಲಾಲ್​ನ ಭೇಟಿ ಮಾಡಿದ್ದರು. ಇದೊಂದು ಸಹಜ ಭೇಟಿ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದರ ಹಿಂದೆ ಸಿನಿಮಾ ಉದ್ದೇಶ ಇದೆ ಎಂದು ಹೇಳಲಾಗುತ್ತಿದೆ. ತಂಡದ ಕಡೆಯಿಂದ ಈ ಬಗ್ಗೆ ಘೋಷಣೆ ಆಗಲಿದೆ ಎನ್ನಲಾಗಿದೆ.
‘ಕಾಂತಾರದ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಕುಂದಾಪುರದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. 2025ರಲ್ಲಿ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ. ಸಿನಿಮಾದ ರಿಲೀಸ್ ದಿನಾಂಕದ ಕುರಿತು ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

Click

https://newsnotout.com/2024/10/puttur-kannada-news-kannada-statute-puttur-dakshina-kannada/
https://newsnotout.com/2024/10/babies-nomore-kananda-news-children-k-viral-issue/
https://newsnotout.com/2024/10/fire-on-self-govinda-actor-of-bollywwod-kannada-news-gun/
https://newsnotout.com/2024/10/super-star-rajanikanth-kannada-news-hospitalized-76-year-old/
https://newsnotout.com/2024/10/uppinangady-fake-call-as-cbi-officer-kannada-news/
See also  ಸುಳ್ಯ: ಅಂಗನವಾಡಿಗೆ ಸಿಕ್ಕಿಲ್ಲ ಆಹಾರ ಧಾನ್ಯ..! ಮಕ್ಕಳು, ಗರ್ಭಿಣಿಯರಿಗೆ ಎದುರಾದ ಸಮಸ್ಯೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ತಲುಪಿಸಿದ 'ನ್ಯೂಸ್ ನಾಟೌಟ್'
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget