ಕರಾವಳಿಕ್ರೀಡೆ/ಸಿನಿಮಾ

“ಕಾಂತಾರ-2” ನಟಿಸಲಿದ್ದಾರಾ ರಜನಿಕಾಂತ್? ಊಹಿಸಿದಕ್ಕಿಂತ ಹೆಚ್ಚು ದೊಡ್ಡ ಸರ್‌ಪ್ರೈಸ್‌ಗಳು ಇರಲಿವೆ ಎಂದಿದ್ದೇಕೆ ರಿಷಬ್..!

ನ್ಯೂಸ್ ನಾಟೌಟ್ : ರಿಷಭ್‌ ಶೆಟ್ಟಿ ನಟನೆಯ ಕಾಂತರ ಕನ್ನಡ ಸಿನಿಮಾ ರಂಗವನ್ನು ಅತಿ ವಿಭಿನ್ನವಾಗಿ ಗುರುತಿಸುವಂತೆ ಮಾಡಿದ ಸಿನಿಮಾ. ಇತ್ತೀಚೆಗೆ ನಟ ಮತ್ತು ನಿರ್ದೇಶಕ ರಿಷಭ್‌ ಶೆಟ್ಟಿ ಮತ್ತು ಅವರ ತಂಡ “ಕಾಂತಾರ 2′ ಸಿನಿಮಾ ತೆರೆಗೆ ಬರುತ್ತಿರುವುದನ್ನು ಖಚಿತಪಡಿಸಿದೆ. ಸದ್ಯ ಈ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ.

ಇದರ ನಡುವೆಯೇ, ಚಿತ್ರತಂಡ “ಕಾಂತಾರ 2′ ಸಿನಿಮಾ ದಲ್ಲಿ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಲು ರಜಿನಿಕಾಂತ್‌ ಅವರನ್ನು ಸಂಪರ್ಕಿಸಿದೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾ ಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆಯ ಬಗ್ಗೆ ಇನ್ನಷ್ಟೆ ತಿಳಿಯಬೇಕಿದೆ.

ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನೂ ಹೊರಹಾಕಿಲ್ಲ. ಇನ್ನು “ಕಾಂತಾರ 2′ ಸಿನಿಮಾದ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ರಿಷಬ್‌ ಶೆಟ್ಟಿ, “ಈ ಸಿನಿಮಾದಲ್ಲಿ ನೀವು ಊಹಿಸಿದಕ್ಕಿಂತ ಹೆಚ್ಚು ದೊಡ್ಡ ಸರ್‌ಪ್ರೈಸ್‌ಗಳು ಇರಲಿವೆ’ ಎಂದಿದ್ದರು.

ಅಲ್ಲದೆ “ಕಾಂತಾರ’ ಸಿನಿಮಾ ನೋಡಿ ರಜನಿಕಾಂತ್‌ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಹೀಗಾಗಿ ರಜಿನಿಕಾಂತ್‌ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದರೂ ಅಚ್ಚರಿಯಿಲ್ಲ ಎಂಬುದು ಅನೇಕ ಸಿನಿಮಾ ವಿಶ್ಲೇಷಕರ ಅಭಿಪ್ರಾಯ.

Related posts

ಎನ್ ಎಂ ಸಿ ನೇಚರ್ ಕ್ಲಬ್ : ಜೀವ ವಿಜ್ಞಾನ ಪದವಿ ವಿದ್ಯಾರ್ಥಿಗಳಿಂದ ಕೃಷಿ ಕ್ಷೇತ್ರ ಅಧ್ಯಯನ, ಕೃಷಿ ಸಾಧಕರ ಭೇಟಿ, ಪರಿಚಯ ಮತ್ತು ಸಂದರ್ಶನ

ಮಂಗಳೂರು : ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ, ಚಾಲಕ ಪುರುಷೋತ್ತಮ ಪೂಜಾರಿಗೆ ರಿಕ್ಷಾ ಹಸ್ತಾಂತರ

ವಿಟ್ಲ: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಅದೃಷ್ಟವಶಾತ್‌ ಚಾಲಕ ಪಾರು