ಕರಾವಳಿ

ಕಾಂತಾರ ಸಿನಿಮಾದ ಆರ್ ಎಕ್ಸ್‌ 100 ಬೈಕ್ ರಹಸ್ಯ ಏನು ಗೊತ್ತಾ?

532

ನ್ಯೂಸ್ ನಾಟೌಟ್: ಕಾಂತಾರ ಸಿನಿಮಾದ ಕ್ರೇಜ್ ಈಗ ಎಷ್ಟಿದೆ ಎಂದರೆ ಇದುವರೆಗೆ ಸಿನಿಮಾ ಥಿಯೇಟರ್‌ಗೂ ಹೋಗದವರೂ ಕೂಡ ಸಿನಿಮಾ ವೀಕ್ಷಿಸಿದ್ದಾರೆ. ಈ ಸಿನಿಮಾ ಕೆಲವೇ ಕೆಲವು ದಿನಗಳಲ್ಲಿ ಬರೋಬ್ಬರಿ 120 ಕೋಟಿ ಬಾಚಿದೆ. ಸದ್ಯ ಸಿನಿಮಾ ವೀಕ್ಷಿಸುವುದಕ್ಕೆ ಜನರೆಲ್ಲರು ಮುಗಿ ಬೀಳುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿದೆ. ಇದೇ ಕಾರಣಕ್ಕೆ ಸಿನಿಮಾ ಭಾರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಸಿನಿಮಾದಲ್ಲಿ ಬಳಕೆಯಾಗಿರುವ ರಿಷಭ್ ಶೆಟ್ಟಿಯ ಬೈಕ್ ಬಗ್ಗೆಯೇ ಭಾರಿ ಚರ್ಚೆ ನಡೆಯುತ್ತಿದೆ.

ಹೌದು, ಈ ಬೈಕ್ ಎಲ್ಲಿಂದ ತಂದ್ರು , ಇಷ್ಟು ಹಳೆಯ ಬೈಕ್ ಅನ್ನೇ ಆ ಸಿನಿಮಾದಲ್ಲಿ ಯಾಕೆ ಬಳಕೆ ಮಾಡಿಕೊಂಡ್ರು? ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಂತಾರ ಸಿನಿಮಾವನ್ನು ನೋಡಿದವರಿಗೆ ಕಾಡದೆ ಇರದು. ಸಿನಿಮಾದಲ್ಲಿ ಬಳಕೆ ಆಗಿರುವ ಯಮಹಾ ಆರ್ ಎಕ್ಸ್ 100 ಬೈಕ್‌ ಅನ್ನು ನೋಡಿದವರಿಗೆ ಆ ದಿನಗಳು ನೆನಪಾಗದಿರದು.

ಆ ಬೈಕ್ ಅನ್ನು ಸಿನಿಮಾಕ್ಕೆ ರಿಷಭ್ ಶೆಟ್ಟಿ ಆಯ್ಕೆ ಮಾಡಿಕೊಂಡಿದ್ದೇ ವಿಶೇಷ. 1990 ನೇ ಮಾಡಲ್ ಬೈಕ್ ಅನ್ನು ರಿಷಭ್ ಶೆಟ್ಟಿ ಕಷ್ಟ ಪಟ್ಟು ಕುಂದಾಪುರದಲ್ಲಿ ಹುಡುಕಿದ್ರು. ಆಗ ಆ ಬೈಕ್ ನ ಮಾಲೀಕ ಕೇಳಿದ್ರು ನಿಮಗೆ ಈ ಬೈಕ್ ಯಾಕೆ ಏಕೆ? ಹೊಸ ಬೈಕ್ ಯೂಸ್ ಮಾಡಬಹುದಲ್ವಾ ಎಂದ್ರು. ಆದರೆ ರಿಷಭ್‌ ಶೆಟ್ಟಿ ಕೊಟ್ಟ ಉತ್ತರ ಪ್ರಶ್ನೆ ಕೇಳಿದವರನ್ನು ದಂಗು ಬಡಿಸಿತು. ಜನರು ಎಲ್ಲವನ್ನೂ ಗಮನಿಸುತ್ತಾರೆ. ಹಾಗಾಗಿ 1990ರ ಕಥೆಯನ್ನು ನಾನು ಅಂದಿನ ದಿನಗಳಿಗೆ ಪರಕಾಯ ಪ್ರವೇಶ ಮಾಡಿ ವಿವರಿಸಬೇಕಿದೆ. ಇಲ್ಲದಿದ್ದರೆ ಜನರ ದೃಷ್ಟಿಯಲ್ಲಿ ನಾವು ಕೊಡುವ ಸಿನಿಮಾದ ಬಗ್ಗೆ ನಂಬಿಕೆ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದರು ರಿಷಭ್‌. ಸಿನಿಮಾಗೂ ಮೊದಲೇ ರಿಷಭ್ ನಡೆಸಿಕೊಂಡಿದ್ದ ತಯಾರಿಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

See also  ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ದ್ವಿಚಕ್ರ ವಾಹನ ಪುಡಿಗೈದ ದುಷ್ಕರ್ಮಿಗಳು!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget