Uncategorized

ನೀವು ಒಂದ್ಸಲ ಹೊಗಳಿದ್ರೆ, ನೂರು ಸಲ ಹೊಗಳ್ದಂಗೆ: ರಜನಿ ಭೇಟಿ ಬಳಿಕ ರಿಷಬ್ ಟ್ವೀಟ್

ನ್ಯೂಸ್ ನಾಟೌಟ್ : ಕನ್ನಡದ ಸಿನಿಮಾ ‘ಕಾಂತಾರ’ವನ್ನು ನೋಡಿ ಹೊಗಳಿದ್ದ ರಜನಿಕಾಂತ್‌ ಅವರನ್ನು ನಟ ರಿಷಬ್‌ ಶೆಟ್ಟಿ ಅವರು ಶುಕ್ರವಾರ ಚೆನ್ನೈನ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಇತ್ತೀಚೆಗಷ್ಟೆ ಸಿನಿಮಾ ನೋಡಿದ್ದ ರಜನಿಕಾಂತ್‌ ಅವರು ಚಿತ್ರದ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದ್ದರು. ’ತಿಳಿದಿರುವುದಕ್ಕಿಂತ ತಿಳಿಯದಿರುವುದು ಬಹಳಷ್ಟಿರುತ್ತವೆ. ಹೊಂಬಾಳೆ ಫಿಲಂಸ್‌, ರಿಷಬ್‌ ಶೆಟ್ಟಿ ಉತ್ತಮ ಸಿನಿಮಾ ನೀಡಿದ್ದಾರೆ. ರಿಷಬ್‌ ನಟನೆ, ನಿರ್ದೆಶನ, ಬರವಣಿಗೆಗೆ ಹ್ಯಾಟ್ಸಪ್‌. ಮೈನವಿರಳೇಸಿರುವ ಅನುಭವ ನೀಡಿದೆ. ತಂಡಕ್ಕೆ ಶುಭಾಶಯಗಳು ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಿಷಬ್‌ ಶೆಟ್ಟಿ, ‘ಸರ್‌ ನೀವು ಭಾರತದ ದೊಡ್ಡ ಸೂಪರ್‌ಸ್ಟಾರ್. ಬಾಲ್ಯದಿಂದಲೂ ನಾನು ನಿಮ್ಮ ಅಭಿಮಾನಿ. ನಿಮ್ಮ ಮೆಚ್ಚುಗೆಯಿಂದ ನನ್ನ ಕನಸು ನನಸಾದಂತಾಗಿದೆ. ಸ್ಥಳೀಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ನೀವು ನನಗೆ ಪ್ರೇರಣೆಯಾಗಿದ್ದೀರಿ’ ಎಂದು ಟ್ವೀಟ್‌ ಮಾಡಿದ್ದರು. ಇದರ ಬೆನ್ನಿಗೇ, ರಿಷಬ್‌ ಶೆಟ್ಟಿ ಚೆನ್ನೈನಲ್ಲಿ ರಜನಿಕಾಂತ್‌ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.‘ನೀವು ಒಂದ್ ಸಲ ಹೊಗಳಿದ್ರೆ… ನೂರು ಸಲ ಹೊಗಳ್ದ೦ಗೆ ನಮಗೆ. ಧನ್ಯವಾದಗಳು ರಜನಿಕಾಂತ್‌ ಸರ್‌. ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ’ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಕಾಂತಾರ ಸಿನಿಮಾ ಸದ್ಯ ತಮಿಳು, ತೆಲುಗು, ಹಿಂದಿ, ಮಲಯಾಳದಲ್ಲಿಯೂ ಉತ್ತಮ ಸ್ಪಂದನೆ ಪಡೆಯುತ್ತಿದೆ.

Related posts

21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್ ಕೊನೆಗೂ ಸಿಕ್ಕಿಬಿದ್ದ..!ಭೂಗತನಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್‌ನನ್ನ ಹಿಡಿದುಕೊಟ್ಟಿದ್ದು ಕಾಡಾನೆ..!ಏನಿದು ಘಟನೆ?

ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಮೈಸೂರು ಜನರನ್ನ ಮಂಗ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ ..!

‘ಅಪ್ಪ’ ಅನ್ನುತ್ತಿದ್ದ ಅಪ್ರಾಪ್ತ ಹೆಣ್ಣು ಮಕ್ಕಳನ್ನೇ ಮುಕ್ಕಿ ತಿನ್ನುತ್ತಿದ್ದ ಕಾಮಿ ಸ್ವಾಮಿ..!