ಕ್ರೈಂದೇಶ-ವಿದೇಶರಾಜಕೀಯವೈರಲ್ ನ್ಯೂಸ್

ಸರ್ಕಾರದಿಂದ ಮನೆ ಕಟ್ಟಿಸಲು ಹಣ ಬಂದ ತಕ್ಷಣ ಊರು ಬಿಟ್ಟ 11 ಮಹಿಳೆಯರು..! ಗಂಡಂದಿರ ಪರದಾಟ, ಅಧಿಕಾರಿಗಳಿಗೆ ದೂರು..!

35
Spread the love

ನ್ಯೂಸ್‌ ನಾಟೌಟ್‌: ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಕಂತಿನ ಹಣ ಪಡೆದ ಮಹಿಳೆಯರು, ತಮ್ಮ ಗಂಡಂದಿರನ್ನು ಬಿಟ್ಟು, ತಮ್ಮ ತಮ್ಮ ಪ್ರೇಮಿಗಳ ಜೊತೆ ಊರಿನಿಂದ ಪರಾರಿಯಾಗಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಗ್ರಾಮವೊಂದರಲ್ಲಿ ಇಂಥದ್ದೊಂದು ವಿಲಕ್ಷಣ ಘಟನೆ ನಡೆದಿವೆ.

ಅದೂ ಒಂದಿಬ್ಬರಲ್ಲ, ಬರೋಬ್ಬರಿ 11 ಮಹಿಳೆಯರು ತಮ್ಮ ಗಂಡನನ್ನು ಬಿಟ್ಟು, ಪ್ರೇಮಿಗಳ ಜೊತೆ ಊರು ಬಿಟ್ಟು ಓಡಿ ಹೋಗಿರೆ ಎನ್ನಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಮೊದಲ ಕಂತಿನ ಹಣ ಪಡೆದ ತಕ್ಷಣ 11 ಮಹಿಳೆಯರು ತಮ್ಮ ಪತಿಯನ್ನು ತೊರೆದು ಪ್ರೇಮಿಗಳೊಂದಿಗೆ ಓಡಿಹೋಗಿದ್ದಾರಂತೆ. ಮಹಾರಾಜ್‌ಗಂಜ್‌ನ ನಿಚ್ಲಾಲ್ ಬ್ಲಾಕ್ ಪ್ರದೇಶದ ಒಟ್ಟು 108 ಗ್ರಾಮಗಳಲ್ಲಿ 2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 2350 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಎರಡು ಸಾವಿರಕ್ಕೂ ಹೆಚ್ಚು ಫಲಾನುಭವಿಗಳ ಮನೆಗಳೂ ಪೂರ್ಣಗೊಂಡಿವೆ.

ಇದರ ಅಡಿಯಲ್ಲಿ 11 ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಮೊದಲ ಕಂತಿನ ಹಣವಾಗಿ 40 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಅತ್ತ ಮೊದಲ ಕಂತಿನ ಹಣದೊಂದಿಗೆ ಹೆಂಡತಿಯರು ಪರಾರಿಯಾಗಿದ್ದರೆ. ಇತ್ತ ಪತಿ, ಮಕ್ಕಳು ಹಾಗೂ ಕುಟುಂಬಸ್ಥರು ಮನೆಯೂ ಇಲ್ಲ, ಹೆಂಡತಿಯೂ ಇಲ್ಲ ಎಂದು ಪರದಾಡುತ್ತಿದ್ದಾರೆ. ಕಂತು ಕಟ್ಟಿಸಿಕೊಂಡು ಓಡಿ ಹೋದ ಮಹಿಳೆಯರ ಗಂಡಂದಿರು ಎರಡನೇ ಕಂತಿನ ಹಣವನ್ನು ಪತ್ನಿಯ ಖಾತೆಗೆ ಕಳುಹಿಸದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/07/darshan-kannada-news-evidences-collection-reaches-more-than-200
https://newsnotout.com/2024/07/police-absonded-kannada-news-bsf-in-madyapradesh-kannada-news
https://newsnotout.com/2024/07/kannada-news-fake-doctors-cought-in-bagalakot-ditrict-news-police
https://newsnotout.com/2024/07/laxury-theft-by-rohith-kannada-news-royal-life-kannada-news-gujarat-police
See also  ಉಳ್ಳಾಲ: ಸಿಸಿಟಿವಿ ಡಿವಿಆರ್ ಕಿತ್ತು ಅಂಗಡಿಯಲ್ಲೇ ಬಿಟ್ಟು ಹೋದ ಮರೆವಿನ ಕಳ್ಳ..! ಸಿಸಿಟಿವಿ ಪರೀಕ್ಷಿಸಿದಾಗ ಬಯಲಿಗೆ ಬಂತು ಸರಣಿ ಕಳ್ಳನ ಅಸಲಿಯತ್ತು..ಇಲ್ಲಿದೆ ನೋಡಿ ವಿಡಿಯೋ..!
  Ad Widget   Ad Widget   Ad Widget   Ad Widget