ಕ್ರೈಂವಿಡಿಯೋವೈರಲ್ ನ್ಯೂಸ್

ಕಾರಲ್ಲಿ ಬಂದ ಮಹಿಳೆಯರು ಹೂವಿನ ಕುಂಡವನ್ನು ಕದ್ದದ್ದೇಕೆ..? ಒಂದು ವಾರದಲ್ಲಿ ಹತ್ತನೇ ಪ್ರಕರಣ! ಅಷ್ಟಕ್ಕೂ ಆ ಹೂವಿನ ಕುಂಡದಲ್ಲೇನಿತ್ತು? ಇಲ್ಲಿದೆ ವೈರಲ್ ವಿಡಿಯೋ

176

ನ್ಯೂಸ್ ನಾಟೌಟ್: ಇಬ್ಬರು ಮಹಿಳೆಯರು ಕಾರಿನಲ್ಲಿ ಬಂದು ಮನೆಯೊಂದರ ಹೊರಗೆ ಇಟ್ಟಿದ್ದ ಹೂವಿನ ಕುಂಡಗಳನ್ನು ಕದ್ದಿರುವ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದ ಪ್ರಕಾರ ಘಟನೆ ನ.11 ಕ್ಕೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೊಹಾಲಿಯ ಸೆಕ್ಟರ್ 78 ರಲ್ಲಿ ಘಟನೆ ನಡೆದಿದ್ದು ಇದರ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಬ್ಬರು ಮಹಿಳೆಯರು ಕಾರಿನಲ್ಲಿ ಬಂದು ಮನೆಯ ಎದುರು ಕಾರು ನಿಲ್ಲಿಸಿ ಕಾರಿನಿಂದ ಇಳಿದ ಮನೆಯ ಕಾಂಪೌಂಡ್ ಮೇಲೆ ಇದ್ದ ಹೂವಿನ ಕುಂಡವನ್ನು ಎಗರಿಸಿ ಕೂಡಲೇ ಕಾರಿನಲ್ಲಿ ಕುಳಿತು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಳೆದ ಒಂದು ವಾರದಲ್ಲಿ ಹತ್ತನೇ ಪ್ರಕರಣ ಇದಾಗಿದೆ ಎಂದು ವರದಿ ತಿಳಿಸಿದೆ.

See also  ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದ್ವಾರದ ಸಮೀಪ ಬಸ್- ಓಮ್ನಿ ಕಾರು ಡಿಕ್ಕಿ, ಕಾರು ಜಖಂ
  Ad Widget   Ad Widget   Ad Widget   Ad Widget   Ad Widget   Ad Widget   Ad Widget