ನ್ಯೂಸ್ ನಾಟೌಟ್: ಧಾರ್ಮಿಕ ಮತಾಂತರದ ಶಂಕೆಯ ಮೇಲೆ ಜನರ ಗುಂಪೊಂದು ಇಬ್ಬರು ಮಹಿಳೆಯರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ರೆಮುನಾ ಪ್ರದೇಶದಲ್ಲಿ ನಡೆದಿದೆ. ಹಲ್ಲೆ ವಿಡಿಯೋ ವೈರಲ್ ಬಳಿಕ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇಬ್ಬರು ಬುಡಕಟ್ಟು ಮಹಿಳೆಯರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಗ್ರಾಮಸ್ಥರನ್ನು ಮನವೊಲಿಸಲು ಖರಿಮುಖ ಗ್ರಾಮಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಈ ವಿಷಯ ಇಡೀ ಗ್ರಾಮದಲ್ಲಿ ಹಬ್ಬಿದ್ದು, ಹಿಂದೂ ಸಂಘಟನೆಯ ಸದಸ್ಯರು ಮತ್ತು ಸ್ಥಳೀಯರನ್ನು ಒಳಗೊಂಡ ಗುಂಪೊಂದು ಸ್ಥಳಕ್ಕೆ ಆಗಮಿಸಿ ಇಬ್ಬರು ಮಹಿಳೆಯರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದೆ ಎಂದು ರೆಮುನಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ (ಒಐಸಿ) ಸುಭಾಷ್ ಚಂದ್ರ ಮಲ್ಲಿಕ್ ತಿಳಿಸಿದ್ದಾರೆ.
ಗುಂಪು ಮಹಿಳೆಯರ ಮುಖವನ್ನು ವಿರೂಪಗೊಳಿಸಿದ್ದು, “ಜೈ ಶ್ರೀ ರಾಮ್” ಎಂದು ಕೂಗುವಂತೆ ಒತ್ತಾಯಿಸಿದೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ನೀಲಗಿರಿ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ವಿಚಾರಣೆ ವೇಳೆ, ಸ್ಥಳೀಯರನ್ನು ಮತಾಂತರಗೊಳಿಸಲು ಗ್ರಾಮಕ್ಕೆ ಹೋಗಿದ್ದಾಗಿ ಮಹಿಳೆಯರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅದೇ ದಿನ, ಸಂತ್ರಸ್ತರು ಮತ್ತು ಸ್ಥಳೀಯರಿಂದ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
Click