ಕ್ರೈಂವೈರಲ್ ನ್ಯೂಸ್

ನಿಗೂಢವಾಗಿ ಕಾಣೆಯಾಗಿದ್ದ ಮಹಿಳೆ ಬಾವಿಯೊಳಗೆ ಜೀವಂತವಾಗಿ ಪತ್ತೆ..! 3 ದಿನಗಳ ಬಳಿಕ ಸಿಕ್ಕ ಆಕೆ ಹೇಳಿದ್ದೇನು..?

213

ನ್ಯೂಸ್ ನಾಟೌಟ್: ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಜೀವಂತವಾಗಿ ಪತ್ತೆಯಾಗಿರುವ ವಿಚಿತ್ರ ಘಟನೆ ಗದಗ ಜಿಲ್ಲೆ ತೋಟಗಂಟಿ ಗ್ರಾಮದಲ್ಲಿ ನಡೆದಿದೆ. ಮೂರು ದಿನ ಬಾವಿಯಲ್ಲಿದ್ದ ಮಹಿಳೆ ಬದುಕಿದ್ದೇ ಪವಾಡವೆಂಬಂತಾಗಿದೆ.

ಕಾಣೆಯಾಗಿದ್ದ ವಿವಾಹಿತೆಯೊಬ್ಬಳು ಅದೇ ಗ್ರಾಮದ ಹೊಲವೊಂದರಲ್ಲಿನ ನೀರಿಲ್ಲದ ಹಳೇ ಬಾವಿಯಲ್ಲಿ ಮೂರು ದಿನಗಳ ನಂತರ ಪತ್ತೆಯಾಗಿದ್ದಾಳೆ. ಅಸ್ವಸ್ಥಳಾಗಿದ್ದ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಯಾರೋ ನನ್ನ ಎಳೆದುಕೊಂಡು ಹೋದರು ಎಂದು ಆಕೆ ತಿಳಿಸಿದ್ದಾಳೆ. ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆಗಸ್ಟ್‌ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬಳು ನವವಿವಾಹಿತೆಯನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ.

ನವವಿವಾಹಿತೆಯ ಕುತ್ತಿಗೆ ಭಾಗ ಹಿಡಿದು ಮನೆ ಬಿಟ್ಟು ಹೋಗುವಂತೆ ಬಲವಂತ ಮಾಡಿದ್ದಳಂತೆ. ಮಾತ್ರವಲ್ಲದೇ ನನ್ನ ಕೈಬಳೆ, ಕಾಲುಂಗರ ನೀಡುವಂತೆ ಅಪರಿಚಿತ ಮಹಿಳೆ ಒತ್ತಾಯ ಮಾಡಿದ್ದಳು. ಇನ್ನು ನನ್ನ ಕಣ್ಣಿಗೆ ಕಾಣದಂತೆ ಮರೆ ಮಾಡಿ ಕುತ್ತಿಗೆ ಹಿಡಿದು ಭಯಪಡಿಸಿದ್ದಳು ಎಂದು ಸಂತ್ರಸ್ಥೆ ಹೇಳಿಕೊಂಡಿದ್ದಾರೆ.
ಜೋಳದ ಹೊಲದ ಮೂಲಕ ನನ್ನನ್ನು ಎಳೆದುಕೊಂಡು ಹೋಗಿ ನಂತರ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದ್ದಳು. ಬಾವಿಗೆ ಬಿದ್ದ ಮಾರನೆ ದಿನ ನನಗೆ ಪ್ರಜ್ಞೆ ಬಂದಿತ್ತು. ಆಗ ಎಷ್ಟೇ ಕಿರುಚಿದರೂ ಸಹಾಯಕ್ಕೆ ಯಾರು ಬರಲಿಲ್ಲ. ಆ. 22 ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆ. ಆದರೆ ಯಾರು ನನಗೆ ಎಳೆದುಕೊಂಡು ಹೋದರು ಎನ್ನುವ ನಿಖರ ಮಾಹಿತಿ ಇಲ್ಲ ಎಂದಿದ್ದಾಳೆ.

Click

https://newsnotout.com/2024/09/kannada-news-3991-pages-in-charge-sheet-kannada-news-darshan-thugudeepa/
https://newsnotout.com/2024/09/vinesh-pogat-entry-to-politics-kannada-news-rahul-gandhi-met/
https://newsnotout.com/2024/09/arun-kumar-puttila-hotel-issue-fir-in-puttur-police-station-ashok-rai-reaction/
https://newsnotout.com/2024/09/women-dsp-and-protest-issue-cctv-putage-kannada-news-viral-news/
https://newsnotout.com/2024/09/pocso-case-on-father-14-year-old-girl-case-kannada-news-tumakur/
https://newsnotout.com/2024/09/arun-kumar-puttila-hotel-issue-fir-in-puttur-police-station-ashok-rai-reaction/
See also  ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಪಾಠ ಮಾಡಿದ ಶಿಕ್ಷಕಿ..! ಮುಖಂಡನ ಕಾರಿಗೆ ಮುತ್ತಿಗೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget