Latestಕ್ರೈಂಬೆಂಗಳೂರುಬೆಂಗಳೂರುರಾಜಕೀಯರಾಜ್ಯ

ಕಾಲ್ತುಳಿತ ಪ್ರಕರಣ: ವಿರಾಟ್ ಕೊಹ್ಲಿ ವಿರುದ್ದವೂ ಎಫ್‌ ಐಆರ್‌ ದಾಖಲಿಸುವಂತೆ ದೂರು..! ಇಲ್ಲಿದೆ ಸಂಪೂರ್ಣ ಮಾಹಿತಿ

409

ನ್ಯೂಸ್ ನಾಟೌಟ್: ಆರ್ ​ಸಿಬಿ (RCB) ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 11 ಅಭಿಮಾನಿಗಳು ದಾರುಣವಾಗಿ ಜೀವ ಕಳೆದುಕೊಂಡಿದ್ದಾರೆ.

ಈ ಸಂಬಂಧ RCB, KSCA, DNA ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ಕೆಲವರನ್ನು ಬಂಧನ ಸಹ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಆರ್​ ಸಿಬಿ ಸ್ಟಾರ್​ ಪ್ಲೇಯರ್ ವಿರಾಟ್ ಕೊಹ್ಲಿ (Virat kohli) ವಿರುದ್ಧವೂ ಸಹ ಎಫ್ ​ಐಆರ್ ದಾಖಲಿಸುವಂತೆ “ನೈಜ ಹೋರಾಟಗಾರರ ವೇದಿಕೆ” ಎಂಬ ಸಂಘಟನೆ ದೂರು ನೀಡಿದೆ.
ವಿರಾಟ್ ಕೊಹ್ಲಿ ವಿರುದ್ದವೂ ಕೂಡ ಎಫ್ ​ಐಆರ್ ದಾಖಲಿಸುವಂತೆ “ನೈಜ ಹೋರಾಟಗಾರರ ವೇದಿಕೆ” ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಗೆ ದೂರು ನೀಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ ಹಲವು ಜನರು ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಈ ದುರಂತದ ಬಗ್ಗೆ ಆರ್‌ಸಿಬಿ ತಂಡ ಸಂತಾಪ ಸೂಚಿಸಿದ್ದು, ವಿರಾಟ್ ಕೊಹ್ಲಿ ಆರ್‌ ಸಿಬಿಯ ಸಂತಾಪ ಸಂದೇಶವನ್ನು ಮರುಹಂಚಿಕೊಂಡಿದ್ದಾರೆ. ಕೆಲವರು ಕೊಹ್ಲಿ ಅವರ ಪ್ರತಿಕ್ರಿಯೆಗೆ ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅವರ ಕೆಲಸವನ್ನು ಸಮರ್ಥಿಸಿದ್ದಾರೆ.  

ಸಪ್ತಪದಿ ತುಳಿದ ‘ಅಗ್ನಿಸಾಕ್ಷಿ’ ಧಾರವಾಹಿ ಖ್ಯಾತಿಯ ನಟಿ, ವೈಷ್ಣವಿ ಗೌಡ ಮದುವೆಯಲ್ಲಿ ಬೆಳ್ಳಿತೆರೆಯ ಹಲವು ನಟಿಯರು ಭಾಗಿ

See also  ಮಟಮಟ ಮಧ್ಯಾಹ್ನ ಗುಂಡಿನ ದಾಳಿ..! ಅನಾಥ ಸ್ಥಿತಿಯಲ್ಲಿ ಕಾರಿನ ಬಳಿ ಇಬ್ಬರ ಹೆಣ ಪತ್ತೆ..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget