ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಜನಪ್ರಿಯ ಪ್ರವಾಸಿ ತಾಣದಲ್ಲಿ ದೈತ್ಯ ಮರ ಉರುಳಿ ಬಿದ್ದು ಇಬ್ಬರು ಸಾವು..! ಇಲ್ಲಿದೆ ವೈರಲ್ ವಿಡಿಯೋ

219

ನ್ಯೂಸ್ ನಾಟೌಟ್: ಇಂಡೋನೇಷ್ಯಾದ ಬಾಲಿಯಲ್ಲಿರುವ ಜನಪ್ರಿಯ ಪ್ರವಾಸಿ ತಾಣದಲ್ಲಿ ದೈತ್ಯ ಮರವೊಂದು ಬಿದ್ದು ಇಬ್ಬರು ಪ್ರವಾಸಿಗರು ಪ್ರಾಣ ಕಳೆದುಕೊಂಡ ಘಟನೆ ಮಂಗಳವಾರ(ಡಿ.10) ಉಬುದ್‌ ನಲ್ಲಿರುವ ಸೇಕ್ರೆಡ್ ಮಂಕಿ ಫಾರೆಸ್ಟ್‌ ನಲ್ಲಿ ಸ್ಥಳೀಯ ಸಮಯ ಮಧ್ಯಾಹ್ನದ ಸುಮಾರಿಗೆ ನಡೆದಿದೆ. ಇದು ದ್ವೀಪದ ಜನಪ್ರಿಯ ತಾಣವಾಗಿದೆ.

ಬಾಲಿಯ ಮಂಕಿ ಫಾರೆಸ್ಟ್‌ ನಲ್ಲಿ ಪ್ರವಾಸಿಗರ ಮೇಲೆ ಬೃಹತ್ ಮರ ಬಿದ್ದಿದೆ. ಇದರ ವೀಡಿಯೊ ಇಂಟರ್ ನೆಟ್ ಅಲ್ಲಿ ಹರಿದಾಡುತ್ತಿದೆ. ಸ್ಥಳೀಯ ವರದಿಗಳ ಪ್ರಕಾರ, ಇಬ್ಬರು ವಿದೇಶಿ ಪ್ರಜೆಗಳಾದ ಫ್ರಾನ್ಸ್‌ ನ ಎಫ್. ಜಸ್ಟಿನ್ ಕ್ರಿಸ್ಟಿನ್ ಮತ್ತು ದಕ್ಷಿಣ ಕೊರಿಯಾದ ಕಿಮ್ ಹ್ಯೋಯುನ್ ಇಬ್ಬರೂ ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾಲಿಯಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯದ ಬಗ್ಗೆ ಜನರಲ್ಲಿ ಕಳವಳವನ್ನು ಉಂಟುಮಾಡಿದೆ. ಒಂದು ವಿಡಿಯೋದಲ್ಲಿ, ಪ್ರವಾಸಿಗರ ಗುಂಪು ಕಾಡಿನ ಉದ್ಯಾನವನದಲ್ಲಿ ನಡೆದಾಡುತ್ತಿರುವುದನ್ನು ನೋಡಬಹುದು. ಆಗ ಅವರಿಗೆ ದೊಡ್ಡ ಶಬ್ದ ಕೇಳಿ ಅಲ್ಲಿಂದ ಓಡತೊಡಗಿದರು. ಆಗ ಮರವೊಂದು ಉರುಳಿಬಿದ್ದು, ಮಾರ್ಗವನ್ನು ಬಂದ್ ಆಗಿದೆ. ಇದರಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

Click

https://newsnotout.com/2024/12/mother-and-2-child-kannada-news-viral-news-bengaluru/
https://newsnotout.com/2024/12/kannada-news-teaching-chennai-school-girl-get-unconcious/
https://newsnotout.com/2024/12/kannada-news-g-kannada-news-police-d-odisha/
https://newsnotout.com/2024/12/udupi-fishing-man-and-theft-4-lakh-rupees-case-police/
https://newsnotout.com/2024/12/indian-army-kannada-news-jammu-and-kashmir-solider-d/
https://newsnotout.com/2024/12/tamil-nadu-kannada-news-12-district-tamilnadu-hf/
https://newsnotout.com/2024/12/puttur-breeza-car-collision-kannada-news-viral-news-d/
See also  ಉಡುಪಿಯಲ್ಲಿ ಸಮುದ್ರಪಾಲಾಗಿದ್ದ ಬ್ಯಾಂಕ್ ಉದ್ಯೋಗಿ..! ಬೆಂಗಳೂರಿನಿಂದ ಬಂದವನ ಮೃತದೇಹ ಪತ್ತೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget