ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಸಾಯಲೆಂದು ಬಂದವಳು ರೈಲಿಗಾಗಿ ಕಾದು-ಕಾದು ಟ್ರ್ಯಾಕ್‌ ನಲ್ಲೇ ನಿದ್ದೆ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಸಾಯಲೆಂದು ರೈಲ್ವೆ ಟ್ರ್ಯಾಕ್‌ನಲ್ಲಿ ಮಲಗಿದ್ದ ಯುವತಿಯೊಬ್ಬಳು ರೈಲಿಗಾಗಿ ಕಾದು ಕಾದು ಟ್ರ್ಯಾಕ್‌ನಲ್ಲೇ ನಿದ್ದೆಗೆ ಜಾರಿದ ವಿಚಿತ್ರ ಘಟನೆಯೊಂದು ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ. ಕೊನೆಗೆ ರೈಲ್ವೆ ಚಾಲಕನ ಸಮಯಪ್ರಜ್ಞೆಯಿಂದಾಗಿ ಸಾಯಲು ಬಂದಿದ್ದ ಯುವತಿಯ ಜೀವ ಉಳಿದಿದೆ.

ಮೋತಿಹಾರ್ ಜಿಲ್ಲೆಯ ಛಕಿಯಾದ ರೈಲು ನಿಲ್ದಾಣಕ್ಕೆ ಸಾಯಲು ಬಂದ ಯುವತಿ ರೈಲಿಗಾಗಿ ಕಾದು-ಕಾದು, ಬಳಿಕ ಅಲ್ಲೇ ಸಮೀಪವಿದ್ದ ರೈಲು ಹಳಿಗಳ ಮೇಲೆ ಆಕೆ ಮಲಗಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ರೈಲು ಮಾತ್ರ ಬಂದಿಲ್ಲ. ಇದಾಗಿ ತುಂಬಾ ಹೊತ್ತಿನ ನಂತರ ಆ ಹಳಿಯ ಮೇಲೆ ರೈಲು ಬಂದಿದೆ. ಆದರೆ ಅದೃಷ್ಟವಶಾತ್ ರೈಲು ಚಾಲಕ ಈ ಯುವತಿ ಟ್ರ್ಯಾಕ್ ಮೇಲೆ ಮಲಗಿರುವುದನ್ನು ದೂರದಿಂದಲೇ ಗಮನಿಸಿದ್ದಾನೆ. ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಸಾಯಲು ಬಂದಿದ್ದ ಯುವತಿಯ ಜೀವ ಉಳಿದಿದೆ.

ಸೆಪ್ಟೆಂಬರ್ 10 ರಂದು ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲು ಚಾಲಕ ರೈಲಿನಿಂದ ಇಳಿದು ಬಂದ ಯುವತಿಯ ಕೈ ಹಿಡಿದು ಮೇಲೆಳಿಸುವುದನ್ನು ಕಾಣಬಹುದು. ಈ ವೇಳೆ ಯುವತಿ ನಿದ್ದೆಯಿಂದ ಎದ್ದಿದ್ದು ತನ್ನ ತಲೆಗೆ ಚೂಡಿಧಾರದ ಶಾಲು ಹಾಕಿ ಎದ್ದು ಕುಳಿತುಕೊಂಡು ಅತ್ತಿತ್ತ ನೋಡುತ್ತಾಳೆ. ಕೂಡಲೇ ಅಲ್ಲಿಸೇರಿದ ಸ್ಥಳೀಯರು ಆಕೆಯನ್ನು ರೈಲ್ವೆ ಹಳಿಯಿಂದ ಮೇಲೆಳಿಸಿ ಪಕ್ಕಕ್ಕೆ ಕರೆತರುತ್ತಾರೆ.

Click

https://newsnotout.com/2024/09/mangaluru-eletric-scooter-kannada-news-notice-issue-mangaluru-corporation/
https://newsnotout.com/2024/09/electric-scooter-ola-kannada-news-viral-news-fire-on-showroom-police-arrested/
https://newsnotout.com/2024/09/food-corporation-of-india-kannada-news-job-vacency-all-over-india/
https://newsnotout.com/2024/09/muslim-ganesha-chaturti-kannada-news-mother-and-father-v/
https://newsnotout.com/2024/09/kannada-news-bengaluru-daravada-man-issue-with-women/

Related posts

52 ಸಾವಿರ ರೂ. ಡೆಪಾಸಿಟ್ ಮಾಡುವಾಗ ಮಹಾಎಡವಟ್ಟು, ಬಟನ್ ಒತ್ತದೇ ವಾಪಸ್ ಬಂದ ಗ್ರಾಹಕನಿಗೆ ಗ್ರಹಚಾರ ಕಾದಿತ್ತು..!

ಶ್ರೀರಾಮ ಭಕ್ತ ‘ಹನುಮಂತ’ ಬುಡಕಟ್ಟು ಜನಾಂಗಕ್ಕೆ ಸೇರಿದವ..! ಏನಿದು ಕಾಂಗ್ರೆಸ್ ಶಾಸಕನ ಹೇಳಿಕೆ?

“ಹಿಂದೂ ಯುವತಿ ನೇಹಾ ಕೊಲೆ ಪ್ರಕರಣವನ್ನು ಬಿಜೆಪಿಯವ್ರು ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ”, ಸಿಎಂ ಸಿದ್ದರಾಮಯ್ಯ ಕಿಡಿ