Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹೂವಿನ ವ್ಯಾಪಾರಿಯನ್ನು ಕ್ರೂರವಾಗಿ ಥಳಿಸಿದ ಸಚಿವನ ಸಂಬಂಧಿ..! ವಿಡಿಯೋ ವೈರಲ್ ಆಗುತ್ತಿದ್ದಂತೆ ದೂರು-ಪ್ರತಿದೂರುಗಳು ದಾಖಲು..!

634

ನ್ಯೂಸ್ ನಾಟೌಟ್ : ಸಚಿವರ ಸಂಬಂಧಿಯೊಬ್ಬರು ಹೂವಿನ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ದರ್ಪ ಮೆರೆದಿರುವ ಘಟನೆ ಉತ್ತರಪ್ರದೇಶದ ಮೀರತ್ ​ನಲ್ಲಿ ನಡೆದಿದೆ. ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಸೋಮೇಂದ್ರ ತೋಮರ್ ಎಂಬವರ ಸಂಬಂಧಿ ನರೇಂದ್ರ ತೋಮರ್ ಹೂವಿನ ವ್ಯಾಪಾರಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮೀರತ್ ​ನ ಜನನಿಬಿಡ ಪ್ರದೇಶದಲ್ಲಿ ಸಚಿವರ ಸಂಬಂಧಿ ಕಾರು ಚಲಾಯಿಸಿಕೊಂಡಿದ್ದು, ಹೂವಿನ ಮಾರ್ಕೆಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಹೂವಿನ ಅಂಗಡಿಯವರೊಬ್ಬರು ಸಚಿವರ ಸಂಬಂಧಿ ಹಾಗೂ ಆಟೋಗೆ ಒಂದು ಕ್ಷಣ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಈ ವೇಳೆ ಸಚಿವರ ಸಂಬಂಧಿ ಆಟೋದವರಿಗೆ ಮುಂದೆ ಬರುವಂತೆ ಹೇಳಿದ್ದು, ಈ ವಿಚಾರವಾಗಿ ಹೂವಿನ ವ್ಯಾಪಾರಿ ಹಾಗೂ ನರೇಂದ್ರ ತೋಮರ್ ನಡುವೆ ಮಾತಿನ ಚಕಮಕಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಹೊಡೆದಾಡಿಕೊಳ್ಳಲು ಶುರು ಮಾಡಿದ್ದು, ಗನ್ ​ಮ್ಯಾನ್ ಇಬ್ಬರು ಜಗಳವನ್ನು ಬಿಡಿಸುತ್ತಿರುವುದು ವಿಡಿಯೋದಲ್ಲಿ ಕಂಡಿದೆ. ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ.

See also  'ಅಂದು ನನ್ನನ್ನು ಸಿಎಂ ಮಾಡಿ ಅಂದಾಗ ಕುಮಾರಸ್ವಾಮಿ ಹೂ ಅನ್ನಲಿಲ್ಲ' ಎಂದ ಡಿಸಿಎಂ..! ಹಳೆಯ ಗುಟ್ಟನ್ನು ಬಯಲು ಮಾಡಿದ ಡಿಕೆಶಿ ಹೇಳಿದ್ದೇನು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget