Latestಕ್ರೈಂವಿಡಿಯೋವೈರಲ್ ನ್ಯೂಸ್

ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ಅಶ್ಲೀಲ ವಿಡಿಯೋ ಮಾಡ್ತಾನೆ ಎಂದು ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ..! ಸರ್ಕಾರಿ ವೈದ್ಯನ ವಿರುದ್ಧ ಎಫ್.ಐ.ಆರ್..!

777

ನ್ಯೂಸ್ ನಾಟೌಟ್: ಹಣಕ್ಕಾಗಿ ನನ್ನ ಗಂಡ ತೃತೀಯ ಲಿಂಗಿ ಮಹಿಳೆಯಂತೆ ನಟಿಸಿ ಅಶ್ಲೀಲ ವಿಡಿಯೋಗಳನ್ನು ಮಾಡುತ್ತಾನೆ ಎಂದು ಹೆಂಡತಿ ಆರೋಪಿಸಿದ ಘಟನೆ ಉತ್ತರ ಪ್ರದೇಶದ ಸಂತ ಕಬೀರ್‌ ನಗರದಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ನನ್ನ ಗಂಡ ತಲೆಗೆ ವಿಗ್‌ ಹಾಗೂ ತುಂಡುಡುಗೆ ತೊಟ್ಟು ಇತರ ಪುರುಷರೊಂದಿಗೆ ಸೇರಿ ಅಶ್ಲೀಲ ವಿಡಿಯೋಗಳನ್ನು ಮಾಡಿ, ಹಣಕ್ಕಾಗಿ ಅದನ್ನು ಆನ್‌ ಲೈನ್‌ ಪ್ಲಾಟ್‌ ಫಾರ್ಮ್‌ಗಳಲ್ಲಿ ಅಪ್‌ ಲೋಡ್‌ ಮಾಡುತ್ತಿದ್ದ ಎಂದು ಹೆಂಡತಿ ಆರೋಪಿಸಿದ್ದಾರೆ. ಈ ವಿಚಿತ್ರ ಪ್ರಕರಣದ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಸರ್ಕಾರಿ ವೈದ್ಯ ಡಾ. ವರುಣೇಶ್‌ ದುಬೆ ಎಂಬವರ ಪತ್ನಿ ಸಿಂಪಿ ಪಾಂಡೆ ಇಂತಹದ್ದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಮತ್ತು ದಾಂಪತ್ಯ ದ್ರೋಹ, ನಿಂದನೆ ಮತ್ತು ಮಾನಸಿಕ ಕಿರುಕುಳದ ಆರೋಪದಡಿ ಪತಿಯ ವಿರುದ್ಧ ಎಫ್‌.ಐ.ಆರ್‌ ಕೂಡ ದಾಖಲಿಸಿದ್ದಾರೆ. ಆತ ಸರ್ಕಾರಿ ವಸತಿ ಗೃಹದಲ್ಲಿ ತಲೆಗೆ ವಿಗ್‌, ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ನಟಿಸುತ್ತಾ ಇತರ ಪುರುಷರೊಂದಿಗೆ ಸೇರಿ ಅಶ್ಲೀಲ ವಿಡಿಯೋಗಳನ್ನು ಮಾಡಿ, ಹಣಕ್ಕಾಗಿ ಅದನ್ನು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಎಂದು ಸಿಂಪಿ ಆರೋಪಿಸಿದ್ದಾರೆ.

ಪತ್ನಿಯ ಆರೋಪಗಳನ್ನೆಲ್ಲಾ ನಿರಾಕರಿಸಿ ಡಾ. ವರುಣೇಶ್‌ ದುಬೆ ಪ್ರತಿ ದೂರು ದಾಖಲಿಸಿದ್ದು, ನನ್ನ ಹೆಸರನ್ನು ಹಾಳು ಮಾಡುವ ಸಲುವಾಗಿ ಇದನ್ನು ಮಾಡಲಾಗಿದೆ. ಇದ್ಯಾವುದು ನಿಜವಲ್ಲ. ಆಕೆಯೇ ಈ ಫೇಕ್‌ ವಿಡಿಯೋಗಳನ್ನು ಸೃಷ್ಟಿಸಿದ್ದಾಳೆ. ನನ್ನ ಪತ್ನಿಯ ಸಂಬಂಧಿ ಸಾಫ್ಟ್‌ ವೇರ್‌ ಇಂಜಿನಿಯರ್‌, ಅವರ ಸಹಾಯದಿಂದ ಡೀಪ್ ಫೇಕ್‌ ವಿಡಿಯೋ ಮಾಡಿ ನನ್ನ ಹೆಸರನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಪತ್ನಿಯ ವಿರುದ್ಧ ಆರೋಪ ಮಾಡಿದ್ದಾರೆ.

ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೌಟುಂಬಿಕ ಹಿಂಸೆ, ಎಐ ಕುಶಲತೆ, ಸೈಬರ್‌ ಅಪರಾಧ ಎಂಬಂತೆ ತನಿಖೆ ನಡೆಸುತ್ತಿದ್ದಾರೆ.

ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಅಪ್ಪ, ಅಮ್ಮ ಮತ್ತು ತಂಗಿ..! ಅಂತ್ಯಕ್ರಿಯೆಗೂ ಬಾರದ ಮಗಳು..!

ಮನುಷ್ಯರನ್ನು ಕೊಂದು ಮೆದುಳು ತಿನ್ನುತ್ತಿದ್ದ ವಿಚಿತ್ರ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ..! 14 ಜನರನ್ನು ಕೊಂದ ಆರೋಪ..!

See also  ಓಡಿ ಹೋಗಿ ಪ್ರಿಯಕರನನ್ನು ವರಿಸಿದ ಮಗಳು..! ಶ್ರದ್ಧಾಂಜಲಿ ಫ್ಲೆಕ್ಸ್​ ಅಳವಡಿಸಿ ಗೋಳಿಟ್ಟ ತಂದೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget