ನ್ಯೂಸ್ ನಾಟೌಟ್: ಸಮಾಜವಾದಿ ಪಕ್ಷದ ಶಾಸಕ ಅತುಲ್ ಪ್ರಧಾನ್ ಅವರು ಮಂಗಳವಾರ(ಫೆ.18) ತಮ್ಮ ಕುತ್ತಿಗೆ ಮತ್ತು ಕೈಗಳಿಗೆ ಕಬ್ಬಿಣದ ಸಂಕೋಲೆಗಳನ್ನು ಕಟ್ಟಿಕೊಂಡು ಉತ್ತರ ಪ್ರದೇಶ ವಿಧಾನಸಭೆ ಪ್ರವೇಶಿಸಿದ್ದಾರೆ.
ಅಮೆರಿಕದಿಂದ ಭಾರತದ ಅಕ್ರಮ ವಲಸಿಗರಿಗೆ ಕೈಕೋಳ ಹಾಕಿ ಗಡೀಪಾರು ಮಾಡಿರುವುದನ್ನು ಅವರು ಈ ರೀತಿ ಪ್ರತಿಭಟಿಸಿದ್ದಾರೆ ಎನ್ನಲಾಗಿದೆ.
ಅಕ್ರಮ ವಲಸಿಗರ ವಿರುದ್ಧ ಡೊನಾಲ್ಡ್ ಟ್ರಂಪ್ ಆಡಳಿತ ಶಿಸ್ತುಕ್ರಮ ಕೈಗೊಂಡಿದ್ದು, ಇದುವರೆಗೆ ಮೂರು ಮಿಲಿಟರಿ ವಿಮಾನಗಳಲ್ಲಿ 300ಕ್ಕೂ ಹೆಚ್ಚು ಭಾರತೀಯರನ್ನು ಪಂಜಾಬ್ ನ ಅಮೃತಸರಕ್ಕೆ ಗಡೀಪಾರು ಮಾಡಿದೆ. ಗಡೀಪಾರಾದವರು ಪ್ರಯಾಣದ ಸಮಯದಲ್ಲಿ ಸಂಕೋಲೆಯಲ್ಲಿದ್ದರು ಎಂದು ವರದಿ ತಿಳಿಸಿವೆ.
ತನ್ನ ನಾಗರಿಕರಿಗಾದ ಅಪಮಾನವನ್ನು ಭಾರತ ಸಹಿಸುವುದಿಲ್ಲ ಎಂದು ಅತುಲ್ ಪ್ರಧಾನ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
‘ಇಂದು, ಬಜೆಟ್ ಅಧಿವೇಶನ ಆರಂಭಕ್ಕೂ ಮೊದಲು ಅಮೆರಿಕದಿಂದ ಅಮಾನವೀಯವಾಗಿ ಗಡೀಪಾರು ಮಾಡಲ್ಪಟ್ಟ ನಮ್ಮ ನಾಗರಿಕರಿಗೆ ನ್ಯಾಯಕ್ಕಾಗಿ ಒತ್ತಾಯಿಸಿದ್ದೇನೆ. ಅಮೆರಿಕದ ಈ ಕೃತ್ಯದಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಅವಮಾನಿತನಾಗಿದ್ದಾನೆ ಮತ್ತು ಡಬಲ್ ಎಂಜಿನ್ ಸರ್ಕಾರವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ’ಎಂದು ಕುಟುಕಿದ್ದಾರೆ.