ಉಡುಪಿಕರಾವಳಿಕ್ರೈಂವೈರಲ್ ನ್ಯೂಸ್

ಉಡುಪಿಯಲ್ಲಿ ಮತ್ತೆ ಗ್ಯಾಂಗ್ ವಾರ್..! ಬೈಕ್ ಬಿಟ್ಟು ಓಡಿದ ಯುವಕರು..! ಒಂದೇ ತಿಂಗಳಲ್ಲಿ 3 ಬಾರಿ ಪುಂಡರ ಕಾಳಗ..!

ನ್ಯೂಸ್‌ ನಾಟೌಟ್ : ಉಡುಪಿಯಲ್ಲಿ ಇತ್ತೀಚೆಗೆ ಗರುಡ ಗ್ಯಾಂಗ್ ನಡುವೆ ಮಾರಾಮಾರಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಗ್ಯಾಂಗ್ ವಾರ್ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜೂನ್ 15ರ ರಾತ್ರಿ ಸೆಲೂನ್ ನೌಕರ ಚರಣ್, ಶಬರಿ ಎಂಬಾತನಿಗೆ ಬೈದಿದ್ದನು. ಈ ವಿಚಾರ ತಿಳಿದ ಪ್ರವೀಣ್ ಮತ್ತು ಈತನ ಗ್ಯಾಂಗ್ ಮಾತುಕತೆಗೆಂದು ಚರಣ್​ನನ್ನು ಉಡುಪಿ ನಗರದ ಬಿರಿಯಾನಿ ಪಾಯಿಂಟ್‌ ಬಳಿ ಕರೆದಿದ್ದರು. ಚರಣ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಆಗಮಿಸಿದ್ದನು ಎನ್ನಲಾಗಿದೆ. ಪ್ರವೀಣ್ ಆ್ಯಂಡ್​ ಟೀಂ ಈ ವೇಳೆ ತಲವಾರು ಬೀಸಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಮತ್ತು ಸಂಗಡಿಗರು ಬೈಕ್, ಸ್ಕೂಟರ್ ಬಿಟ್ಟು ಓಡಿದ್ದಾರೆ. ಚರಣ್ ಸಿಗದಿದ್ದಕ್ಕೆ ಬಿಟ್ಟು ಹೋದ ಬೈಕ್ ಮೇಲೆ ತಲವಾರಿನಿಂದ ಹಾನಿ ಮಾಡಿದ್ದಾರೆ ಎನ್ನಲಾಗಿದೆ.

ಪುಂಡರು ತಾವು ಕೃತ್ಯವೆಸಗಿರುವ ದೃಶ್ಯವನ್ನು ವೀಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಮೂರು ಗ್ಯಾಂಗ್ ವಾರ್ ಪ್ರಕರಣ ವರದಿಯಾಗಿದ್ದಾವೆ.

Click 👇

https://newsnotout.com/2024/06/darshan-case-shed-issue-owner-reaction
https://newsnotout.com/2024/06/kodagu-well-elephant-issue-forest-department-kannada-news

Related posts

30 ವರ್ಷದ ಮಹಿಳೆಯನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ಗ್ರೇಟ್‌ ಖಲಿ..! ಇಲ್ಲಿದೆ ವೈರಲ್ ವಿಡಿಯೋ

ಕತ್ತರಿಸಿದ ಮೂಗನ್ನು ಬ್ಯಾಗ್ ​ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಓಡಿ ಬಂದ ಮಹಿಳೆ..! ಜಮೀನು ವಿಚಾರಕ್ಕೆ ಹೊಡೆದಾಟ..!

ಮಲಯಾಳಂನ ಖ್ಯಾತ ನಟಿಗೆ ಅವಹೇಳನಕಾರಿ ಟೀಕೆ..! ಉದ್ಯಮಿ ಪೊಲೀಸ್ ವಶಕ್ಕೆ