ದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಪಶು ಆಸ್ಪತ್ರೆಗೆ ಮರಿಯನ್ನು ತಂದು ಚಿಕಿತ್ಸೆ ಕೊಡಿಸಿದ ಶ್ವಾನ..! ಭಾರೀ ಮಳೆ ನಡುವೆಯೇ ಬಂದ ಶ್ವಾನವನ್ನು ನೋಡಿ ವೈದ್ಯರು ಭಾವುಕ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಸಾವಿನ ಅಂಚಿನಲ್ಲಿ ಇದ್ದ ತನ್ನ ಮರಿಯನ್ನು ತಾಯಿ ಶ್ವಾನವೊಂದು ಟರ್ಕಿಯ ಪಶುವೈದ್ಯರ ಕ್ಲಿನಿಕ್‌ ಗೆ ಕಚ್ಚಿ ಕೊಂಡು ಬಂದು ಚಿಕಿತ್ಸೆ ಕೊಡಿಸಿದ ವಿಶೇಷ ಘಟನೆ ನಡೆದಿದೆ.

ಭಾರೀ ಮಳೆ ನಡುವೆಯೇ ಶ್ವಾನ ಮರಿಯನ್ನು ಕಚ್ಚಿಕೊಂಡು ಕ್ಲಿನಿಕ್‌ ನತ್ತ ಬಂದಿತ್ತು. ಕೂಡಲೇ ವೈದ್ಯರು ಮರಿಯನ್ನು ಪರಿಶೀಲಿಸಿದಾಗ ಅದರ ಹೃದಯ ಬಡಿತ ಕಡಿಮೆಯಾಗಿತ್ತು. ಕೂಡಲೇ ಚಿಕಿತ್ಸೆ ನೀಡಿ ಅದನ್ನು ಬದುಕಿಸಿದ್ದಾರೆ. ಚಿಕಿತ್ಸೆ ನೀಡುವ ವೇಳೆ ಹೆಣ್ಣು ಶ್ವಾನ ವೈದ್ಯರ ಬಳಿಯೇ ಇತ್ತು ಎನ್ನಲಾಗಿದೆ. ಆ ಶ್ವಾನದ ಸ್ಪಂದನೆ ಮತ್ತು ಅದರ ಬುದ್ಧಿವಂತಿಕೆ ಕಂಡು ವೈದ್ಯರು ಭಾವುಕರಾಗಿದ್ದರು.

Related posts

Drone prathap: ಡ್ರೋನ್ ಪ್ರತಾಪ್ ಜನ್ಮದಿನದಂದು 5 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ, ಈ ಬಗ್ಗೆ ಪ್ರತಾಪ್ ಹೇಳಿದ್ದೇನು..?

1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಈಗ ಸನ್ಯಾಸಿ..! ಕುಂಭಮೇಳದಲ್ಲಿ ಕಾಣಿಸಿಕೊಂಡ ಕರ್ನಾಟಕದ ಸಾಧು..!

ಕೃಷ್ಣ ಜನ್ಮಾಷ್ಟಮಿಗೆ ದೇವಸ್ಥಾನಕ್ಕೆ ಹೋದ ಬಾಲಕಿಯರ ನಿಗೂಢ ಸಾವು..! ಮರದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಶವಗಳು ಪತ್ತೆ..!