ಕರಾವಳಿಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಶಿಕ್ಷಕಿ ಪಾಠ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು 14ರ ಬಾಲಕಿ ಸಾವು..! ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

240

ನ್ಯೂಸ್ ನಾಟೌಟ್: ಅಧ್ಯಾಪಕಿ ಪಾಠ ಮಾಡುತ್ತಿದ್ದ ವೇಳೆ ತರಗತಿಯಲ್ಲಿ ವಿದ್ಯಾರ್ಥಿನಿಯೋರ್ವಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ತಮಿಳುನಾಡಿನ ರಾಣಿಪೇಟೆಯಲ್ಲಿ ಡಿ.10ರಂದು ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.

ರಾಣಿಪೇಟೆಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅದ್ವಿತಾ(14) ಮೃತ ಬಾಲಕಿ ಎಂದು ಗುರುತಿಸಲಾಗಿದೆ.

ಚೆನ್ನೈ-ಬೆಂಗಳೂರು ಹೆದ್ದಾರಿ (NH 44)ಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಬೆಳಿಗ್ಗೆ 11.30 ರ ಸುಮಾರಿಗೆ ಟೀಚರ್ ತರಗತಿ ನಡೆಸುತ್ತಿದ್ದ ವೇಳೆ ಕೊನೆಯ ಬೆಂಚ್ ನಲ್ಲಿ ತನ್ನ ಸಹಪಾಠಿಯ ಜೊತೆ ಕುಳಿತಿದ್ದ ವಿದ್ಯಾರ್ಥಿನಿ ಅದ್ವಿತಾ ಒಮ್ಮೆಲೇ ಕುಸಿದು ಸಹಪಾಠಿಯ ಮೇಲೆ ಒರಗಿದ್ದಾಳೆ. ಈ ವೇಳೆ ಗಾಬರಿಗೊಂಡ ಸಹಪಾಠಿ ಕಿರುಚಿದ್ದಾಳೆ. ಇದನ್ನು ಗಮನಿಸಿದ ಶಿಕ್ಷಕಿ ಕೂಡಲೇ ಅದ್ವಿತಾ ನೆರವಿಗೆ ಧಾವಿಸಿದ್ದಾರೆ. ಅಲ್ಲದೆ ಅಲ್ಲಿದ್ದ ಇತರ ವಿದ್ಯಾರ್ಥಿಗಳ ಬಳಿ ಶಾಲೆಯ ಶಿಕ್ಷಕರನ್ನು ಕರೆಯುವಂತೆ ಹೇಳಿದ್ದಾರೆ, ಕೂಡಲೇ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಶಿಕ್ಷಕರನ್ನು ಕರೆಯಲು ಓಡಿದ್ದಾರೆ.

ಕೂಡಲೇ ವಿದ್ಯಾರ್ಥಿನಿಯನ್ನು ಪಕ್ಕದ ಆಸ್ಪತ್ರೆಗೆ ಕರೆದೊಯ್ದರೂ ಪರಿಶೀಲಿಸಿದ ವೈದ್ಯರು ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ವೇಳೆ ವಿದ್ಯಾರ್ಥಿನಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದಳು ಎಂದು ಬಾಲಕಿಯ ಪೋಷಕರು ಮಾಹಿತಿ ನೀಡಿದ್ದಾರೆ.

Click

https://newsnotout.com/2024/12/kannada-news-g-kannada-news-police-d-odisha/
https://newsnotout.com/2024/12/udupi-fishing-man-and-theft-4-lakh-rupees-case-police/
See also  ಗುತ್ತಿಗಾರು:ಕರಾಟೆ ನುರಿತ ಶಿಕ್ಷಕರಿಂದ ಕರಾಟೆ ತರಬೇತಿ ಕಾರ್ಯಾಗಾರ,ಯಾವಾಗ? ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ.
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget