ದೇಶ-ವಿದೇಶರಾಜಕೀಯವೈರಲ್ ನ್ಯೂಸ್ಸಿನಿಮಾ

ಸಿನಿಮಾ ರಂಗ ತೊರೆದು ರಾಜಕೀಯದಲ್ಲಿ ಪವರ್ ತೋರಿಸಿದ ದಳಪತಿ ವಿಜಯ್..! ಮೊದಲ ರಾಜಕೀಯ ರ‍್ಯಾಲಿಯಲ್ಲೇ 6 ಲಕ್ಷಕ್ಕೂ ಅಧಿಕ ಮಂದಿ ಭಾಗಿ..! ಇಲ್ಲಿದೆ ವಿಡಿಯೋ

254

ನ್ಯೂಸ್ ನಾಟೌಟ್: ದಳಪತಿ ವಿಜಯ್ ಸಿನಿಮಾ ರಂಗ ತೊರೆಯಲು ರೆಡಿ ಆಗಿದ್ದಾರೆ. ಅವರು ‘ತಮಿಳಗ ವೆಟ್ರಿ ಕಳಗಮ್’ (ಟಿವಿಕೆ) ಪಕ್ಷ ಘೋಷಣೆ ಮಾಡಿದ್ದು, ಮೊದಲ ರ‍್ಯಾಲಿ ನಡೆಸಿದ್ದಾರೆ. ಈ ರ‍್ಯಾಲಿಯಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು.

ವಿಜಯ್ ಅವರ ವೃತ್ತಿ ಜೀವನ ಉತ್ತುಂಗದಲ್ಲಿ ಇದೆ. ಅವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಪಡೆಯುತ್ತಾರೆ. ಹೀಗಿರುವಾಗಲೇ ಅವರು ಚಿತ್ರರಂಗ ತೊರೆಯುವ ನಿರ್ಧಾರ ಮಾಡಿ ರಾಜಕೀಯ ಪ್ರವೇಶಿಸಿದ್ದಾರೆ. ‘ನಾನು ನನ್ನ ವೃತ್ತಿ ಜೀವನ ಉತ್ತುಂಗದಲ್ಲಿರುವಾಗ ತೊರೆದೆ. ನನ್ನ ಸಂಪಾದನೆ ತೊರೆದೆ. ನಿಮ್ಮ ವಿಜಯ್ ಆಗಿ ಇಲ್ಲಿದ್ದೇನೆ. ನಿಮ್ಮನ್ನು ನಂಬಿ ಬಂದಿದ್ದೇನೆ’ ಎಂದು ವಿಜಯ್ ರ‍್ಯಾಲಿಯಲ್ಲಿ ಮಾತನಾಡಿದ್ದಾರೆ.

ಚೆನ್ನೈನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ಸುಮಾರು ಐದರಿಂದ ಆರು ಲಕ್ಷ ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರ‍್ಯಾಲಿ ನಡೆದ ಜಾಗದಲ್ಲಿ ಭರ್ಜರಿ ಟ್ರಾಫಿಕ್ ಜಾಮ್ ಆಗಿತ್ತು. ತಡರಾತ್ರಿವರೆಗೂ ಟ್ರಾಫಿಕ್ ಹಾಗೆಯೇ ಇತ್ತು ಎನ್ನಲಾಗಿದೆ.
ಸದ್ಯ ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ‘ದಳಪತಿ 69’ ಕೆಲಸ ಕೂಡ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕನ್ನಡದ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡುತ್ತಿದೆ. ಈ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

Click

https://newsnotout.com/2024/10/delivery-boys-bike-got-fired-kannada-news-parking-area/
https://newsnotout.com/2024/10/golgappa-food-department-of-karnataka-kannada-news-food/
https://newsnotout.com/2024/10/ayodya-kannada-news-deepawali-28-lakh-deepas-are-lightening/
See also  ಮೂತ್ರ ವಿಸರ್ಜಿಸಲು ಮಾರ್ಗ ಮಧ್ಯೆ ಟ್ರೈನ್ ನಿಲ್ಲಿಸಿದರಾ ಲೋಕೋ ಪೈಲಟ್‌..! ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜನೆಯ ವಿಡಿಯೋ ವೈರಲ್‌..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget