ಕರಾವಳಿಕ್ರೀಡೆಕ್ರೀಡೆ/ಸಿನಿಮಾಸುಳ್ಯ

ಸುಳ್ಯ: ನಾಳೆ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕೂಟ ಆಯೋಜನೆ, ಬೆಳಗ್ಗೆ 10 ಗಂಟೆಗೆ ಕೂಟಕ್ಕೆ ಚಾಲನೆ

169

ನ್ಯೂಸ್ ನಾಟೌಟ್: ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ (ರಿ)ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಬಾಲಕ -ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಕೂಟ ನ.12 ರಂದು ಬೆಳಗ್ಗೆ 10ಗಂಟೆಗೆ ಸುಳ್ಯದ ಮಿತ್ತಡ್ಕ ಆಲೆಟ್ಟಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.

ಕೂಟದ ಉದ್ಘಾಟನೆಯನ್ನು ಶಾಲಾ ಶಿಕ್ಷಣ (ಪದವಿಪೂರ್ವ ) ಇಲಾಖೆ ದ.ಕ ಉಪನಿರ್ದೇಶಕ ಸಿ.ಡಿ ಜಯಣ್ಣ ನೆರವೇರಿಸಲಿದ್ದಾರೆ. ರೋಟರಿ ವಿದ್ಯಾಸಂಸ್ಥೆಗಳು ಸುಳ್ಯ ಸಂಚಾಲಕ ರೊ. PP PHF ಪ್ರಭಾಕರನ್ ನಾಯರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರೋಟರಿ ಚಾರಿಟೇಬಲ್ ಟ್ರಸ್ಟ್ (ರಿ) ಸುಳ್ಯ ಇದರ ಅಧ್ಯಕ್ಷೆ ರೊ.ಎಮ್ .ಯೋಗಿತಾ ಗೋಪಿನಾಥ್ ,ಸಂ.ಪ.ಪೂ ಕಾಲೇಜು ಸುಳ್ಯ ಪ್ರಾಂಶುಪಾಲೆ ರೋ. ಶೋಭಾ ಬೊಮ್ಮೆಟ್ಟಿ, ಎಸ್. ಎಸ್. ಪಿ.ಯು. ಕಾಲೇಜು ಸುಬ್ರಹ್ಮಣ್ಯ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ನೆರವೇರಿಸಲಿದ್ದಾರೆ.

Click

https://newsnotout.com/2024/11/gps-kannada-news-eagle-viral-news-karavara-case/
https://newsnotout.com/2024/11/ksrtc-kananda-news-google-pay-phone-pay-viral-news/
https://newsnotout.com/2024/11/jameer-ahamad-khan-kannada-news-governer-of-karnataka-viral-news/
See also  ಸುಳ್ಯ: ಹಲವು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದವ ಅರೆಸ್ಟ್ !
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget