ಕ್ರೈಂವೈರಲ್ ನ್ಯೂಸ್

ಸೇತುವೆಯಿಂದ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿ..! ಕೆರೆಗೆ ಧುಮುಕಿ ಆಕೆಯನ್ನು ರಕ್ಷಿಸಿದ ‘ಹೋಮ್ ಗಾರ್ಡ್’ ಸಿಬ್ಬಂದಿ

ನ್ಯೂಸ್‌ ನಾಟೌಟ್‌: ಸೇತುವೆಯಿಂದ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಜೀವದ ಹಂಗು ತೊರೆದು ಗೃಹರಕ್ಷಕ ಸಿಬ್ಬಂದಿ ರಕ್ಷಿಸಿರುವ ಪ್ರಸಂಗ ಚಾಮರಾಜನಗರದ ಕೊಳ್ಳೇಗಾಲದಲ್ಲಿ ಇಂದು(ಡಿ.8) ನಡೆದಿದೆ.

ಹನೂರು ತಾಲೂಕಿನ ಕಣ್ಣೂರಿನ ರಾಜಮ್ಮ (17) ಕೆರೆಗೆ ಬಿದ್ದಿದ್ದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಕೊಳ್ಳೇಗಾಲದ ಚಿಕ್ಕರಂಗನಾಥಕೆರೆ ಯುವತಿ ಈಕೆ ಎನ್ನಲಾಗಿದೆ. ಬಿದ್ದ ತಕ್ಷಣ ಹತ್ತಿರದಲ್ಲೇ ಇದ್ದ ಗೃಹರಕ್ಷಕ ಸಿಬ್ಬಂದಿ ಕೃಷ್ಣಮೂರ್ತಿ ಎಂಬವರು ಕೆರೆಗೆ ಧುಮುಕಿ ವಿದ್ಯಾರ್ಥಿನಿಯ ರಕ್ಷಣೆ ಮಾಡಿದ್ದಾರೆ.

ಜೆ.ಎಸ್‌.ಎಸ್ ಕಾಲೇಜಿನ ಪ್ರಥಮ ಪಿ.ಯು ವಿದ್ಯಾರ್ಥಿನಿ ಕೆರೆಗೆ ಬಿದ್ದಾಗ ಸ್ಥಳೀಯರ ಸಹಕಾರದಿಂದ ಕೃಷ್ಣಮೂರ್ತಿ ಮೇಲಕ್ಕೆತ್ತಿದ್ದಾರೆ ಎನ್ನಲಾಗಿದೆ. ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Click

https://newsnotout.com/2024/12/kannada-news-pet-dog-viral-video-kannada-news-video/
https://newsnotout.com/2024/12/marriage-issue-dubai-groom-and-bride-missing-kannada-news-d/
https://newsnotout.com/2024/12/mangaluru-ganja-district-jail-issue-suspence-viral-news-d/
https://newsnotout.com/2024/12/kannada-news-district-hospital-of-ballary-jameer-ahamad-khan/

Related posts

ಮದುವೆ ತಯಾರಿಯಲ್ಲಿದ್ದಾರಾ ಮಿಲ್ಕಿ ಬ್ಯೂಟಿ?ತಮನ್ನಾ ಭಾಟಿಯಾ ಹಸೆಮಣೆ ಏರೋದು ಯಾವಾಗ? ಏನಿದು ವೈರಲ್ ಸುದ್ದಿ?

ಸುಳ್ಯ: ನಿಯಂತ್ರಣ ತಪ್ಪಿ ಕಾರು ಪಲ್ಟಿ..! ಶಾಲಾ ಮಕ್ಕಳನ್ನು ಕರೆ ತರುತ್ತಿದ್ದ ಬೈಕ್ ಗೆ ಡಿಕ್ಕಿ!

ಶಾಲೆಗೆ ಬೀಗ ಜಡಿದ ಸಾಲ ಕೊಟ್ಟ ಬ್ಯಾಂಕ್..! ಅತಿಕ್ರಮಣ ಮಾಡದಂತೆ ಬ್ಯಾಂಕ್ ನಿಂದ ಎಚ್ಚರಿಕೆ ಬರಹ..!